Ad imageAd image

ಬಾಗೇಪಲ್ಲಿ ತಾಲ್ಲೂಕು ಪತ್ರಕರ್ತರ ಧ್ವನಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಿ.ಎ.ಬಾಬಾಜಾನ್ ಅಯ್ಕೆ

Bharath Vaibhav
ಬಾಗೇಪಲ್ಲಿ ತಾಲ್ಲೂಕು ಪತ್ರಕರ್ತರ ಧ್ವನಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಿ.ಎ.ಬಾಬಾಜಾನ್ ಅಯ್ಕೆ
WhatsApp Group Join Now
Telegram Group Join Now

ಬಾಗೇಪಲ್ಲಿ: ಪಟ್ಟಣದ ಖಾಸಗಿ ಗೃಹಕಛೇರಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿ.ಮುದ್ದುಕೃಷ್ಣರವರ ನೇತೃತ್ವದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಎಲ್ಲಾ ಸದಸ್ಯರು ಚರ್ಚಿಸಿ ಬಿ.ಎ.ಬಾಬಾಜಾನ್ ರವರನ್ನು ಬಾಗೇಪಲ್ಲಿ ತಾಲ್ಲೂಕು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತ್ತು.
ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷರಾದ ವಿ. ಮುದ್ದುಕೃಷ್ಷರವರು ಮಾತನಾಡಿ, ಬಿ.ಎ.ಬಾಬಾಜಾನ್ ರವರು ಸುಮಾರು 20 ವರ್ಷಗಳಿಂದಲ್ಲೂ ಕಾರ್ಯನಿರತ ಪತ್ರಕರ್ತರಾಗಿ, ವಿವಿಧ ಪತ್ರಿಕೆಗಳಾದ ಪಾಲಾರ್ ದಿನ ಪತ್ರಿಕೆ, ಕನ್ನಡ ತಿಲಕ, ಸಾರಿಗೆವಾರ್ತೆ, ವಿಷ್ಣುಸೇನೆ ಪತ್ರಿಕೆ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ, ಈಸಂಜೆ, ಪ್ರಜಾವಾಹಿನಿ, ಸುವರ್ಣ ಪಾಲಾರ್ ಪತ್ರಿಕೆ,ಗಳಲ್ಲಿ ವರದಿಗಾರರಾಗಿ ಸೇವೆಸಲ್ಲಿಸಿ, ಪ್ರಸುತ್ತ ಭಾರತ ವೈಭವ ಪತ್ರಿಕೆ ಮತ್ತು ಸಂಜೆವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ ಸಮಾಜಮುಖಿ, ಜನಪರ,ಬಡವರಪರ,ರೈತರಪರ ಹಲವಾರು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಮಾಡಿದ್ದರಿಂದ ಬಿ.ಎ.ಬಾಬಾಜಾನ್ ರವರಿಗೆ ‘ಮಾಧ್ಯಮ ರತ್ನ ‘ ರಾಜ್ಯ ಪ್ರಶಸ್ತಿ ಲಭಿಸಿದೆ. ಅದ್ದರಿಂದ ಬಾಗೇಪಲ್ಲಿ ತಾಲ್ಲೂಕು ನೂತನ ಅಧ್ಯಕ್ಷರಾಗಿ ಬಿ.ಎ.ಬಾಬಾಜಾನ್ ರವರನ್ನು ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!