ಚನ್ನಮ್ಮನ ಕಿತ್ತೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚನ್ನಮ್ಮನ ಕಿತ್ತೂರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚೆನ್ನಮ್ಮನ ಕಿತ್ತೂರು ಕಿ ನಾ ವಿ ವ ಸಂಘದ ಮಹಾವಿದ್ಯಾಲಯ ಇವುಗಳ ಸಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಂಪರೆ ದಿನಾಚರಣೆ 2026 ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಕಲ್ಮಠದ ಪೂಜ್ಯ ಶ್ರೀಗಳು ಪರಂಪರೆಗಳನ್ನು ಉಳಿಸುವ ಅಗತ್ಯತೆ ಮತ್ತು ಅವುಗಳು ದೇಶದ ಗೌರವದ ಪ್ರತೀಕವಾಗಿ ನಿಲ್ಲುತ್ತವೆ ಎಂಬುದನ್ನು ತಿಳಿಸಿದರು. ಈ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ಡಾ. ಚಂದ್ರಶೇಖರ ತಾಬೋಜಿ ಜಾಗತಿಕ ಪರಂಪರಾ ತಾಣಗಳು ಹಾಗೂ ರಾಜ್ಯದ ಮತ್ತು ಸ್ಥಳೀಯ ಪಾರಂಪರಿಕ ತಾಣಗಳ ಕುರಿತು ಅವುಗಳ ಉಲ್ಲೇಖ ಅವುಗಳ ಐತಿಹಾಸಿಕ ಮಹತ್ವ ಮತ್ತು ನೈಸರ್ಗಿಕ ಪ್ರಮುಖ ತಾಣವಾದ ಸಹ್ಯಾದ್ರಿ ಪರ್ವತ ಶ್ರೇಣಿಗಳ ಕುರಿತು ವಿವರವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪರಂಪರೆಗಳನ್ನು ಉಳಿಸುವ ಮನಸ್ಥಿತಿಯ ಕುರಿತು ತಿಳಿಸಿದರು ಹಾಗೆ ಮುಂದಿನ ದಿನಗಳಲ್ಲಿ ಯುವ ಪೀಳಿಗೆಯ ಇವುಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಬೇಕೆಂದು ಆಶಿಸಿದರು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡಿದ ಪುರಾತತ್ವ ಮತ್ತು ಪರಂಪರೆ ಇಲಾಖೆಯ ಕ್ಯುರೆಟರ್ ಆದ ಶ್ರೀ ರಾಘವೇಂದ್ರ ಮಾತನಾಡಿ ಪರಂಪರೆಯ ಉಳಿವಿನ ಅಗತ್ಯತೆ ಈ ದಿನಾಚರಣೆ ಹಿನ್ನೆಲೆಯನ್ನು ತಿಳಿಸುತ್ತಾ ಸರ್ವರಿಗೂ ಸ್ವಾಗತ ಕೋರಿದರು. ಹಾಗೆ ಮುಂಜಾನೆಯ ಮೊದಲ ಅವಧಿಯಲ್ಲಿ ಕಲ್ಮಠದ ಆವರಣದಲ್ಲಿರುವ ಕಿತ್ತೂರು ಸಂಸ್ಥಾನದ ರಾಜರುಗಳ ಸಮಾಧಿಗಳನ್ನು ಸ್ವಚ್ಛತೆಗೊಳಿಸುವುದು ಮತ್ತು ಅವುಗಳನ್ನು ಶುದ್ಧಗೊಳಿಸುವ ಕಾರ್ಯ ಜರುಗಿತು. ಕಾರ್ಯಕ್ರಮದಲ್ಲಿ ಏಳು ತಂಡಗಳ ಮುಖ್ಯಸ್ಥರೊಂದಿಗೆ ಯೋಜಿಸಿ ವಿದ್ಯಾರ್ಥಿಗಳ ಹಂಚಿಕೆಯನ್ನು ಮಾಡಲಾಯಿತು. ಈ ಎಲ್ಲಾ ತಂಡಗಳು ಅತ್ಯಂತ ಯಶಸ್ವಿಯಾಗಿ ರಾಜರುಗಳ ಸಮಾಧಿ ಮತ್ತು ಕಟ್ಟಡಗಳನ್ನು ಅತ್ಯಂತ ಜಾಗರೂಕತೆಯಿಂದ ಸ್ವಚ್ಛ ಮತ್ತು ಶುದ್ಧಗೊಳಿಸುವ ಕಾರ್ಯವನ್ನು ನೆರವೇರಿಸಿದರು ಪ್ರಾರಂಭದಲ್ಲಿ ಇವುಗಳ ಸ್ವಚ್ಛತಾ ಕಾರ್ಯ ಮತ್ತು ಪರಂಪರೆಯ ಕುರಿತು ಶಿಕ್ಷಕರಾದ ಮಂಜುನಾಥ ಕಳಸಣ್ಣವರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಾಗೆ ಕಲ್ಮಠದ ಪೂಜ್ಯ ಶ್ರೀಗಳು ಸ್ವಚ್ಛತೆಯ ಕಾರ್ಯದಲ್ಲಿ ತೊಡುಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಕಾರ್ಯದ ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಕಿತ್ತೂರು ಪಟ್ಟಣ ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ ಎಫ್ ಜಕಾತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಐತಿಹಾಸಿಕ ಸ್ಥಳಗಳ ಕುರಿತು ತಿಳಿಸಿದರು. ಹಾಗೆ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಮಲ್ಲಯ್ಯ ಹಿರೇಮಠ ,ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ ಎನ್ ಹೊಸಮನಿಯವರು ಹಾಗೂ ಕೆ, ಎನ್ ,ವಿ,ವ ಕಾಲೇಜಿನ ಪ್ರಾಚಾರ್ಯರಾದ ಎಚ್ ಕೆ ನಾಗರಾಜ್ ಅವರು, ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್ ಬಿ ದಳವಾಯಿ, ಪ್ರಾಧ್ಯಾಪಕರಾದ ಶಿವಾಜಿ ಗುಡಾಜಿ, ರಾಜಶೇಖರ ಇಲಕಲ್, ಉಪ ಪ್ರಾಂಶುಪಾಲರಾದ ಮಹೇಶ್ ಚೆನ್ನಂಗಿ, ಮುಖ್ಯೋಪಾಧ್ಯಾಯರಾದ ಶ್ರೀ ಬಿ.ಸಿ. ಬಿದರಿ ಎಂ. ಆರ್. ಶಹಪುರ್, ಎನ್ ಜಿ ಪಾಟೀಲ್, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಮಂಜುನಾಥ್ ದೊಡ್ಡಣ್ಣವರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಮಹೇಶ ಹೊಂಗಲ ನಿರೂಪಿಸಿದರು, ಶಿಕ್ಷಕರಾದ ರಾಜಶೇಖರ ರಗಟಿ ವಂದಿಸಿದರು. ಕುಮಾರಿ ಕೃತಿ ರಾಘವೇಂದ್ರ ಪ್ರಾರ್ಥನೆ ಸಲ್ಲಿಸಿದರು. ಎರಡೂ ಕಾಲೇಜಿನ ಎನ್ಎಸ್ಎಸ್ ತಂಡದ ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರು ಉಪಸ್ಥಿತರಿದ್ದರು..




