Ad imageAd image

ಕುಡಿಯಲು ನೀರಿಲ್ಲದೆ ಸುಮಾರು 15 ದಿನ ಕಳೆದರೂ ಕೂಡ ಮೂಲಸೌಕರ್ಯಗಳಿಲ್ಲದೆ ಶಾಪಗ್ರಸ್ತವಾದ ರಾಯಪುರದ ಮ್ಯಾಸರಹಟ್ಟಿ ಗ್ರಾಮ.

Bharath Vaibhav
ಕುಡಿಯಲು ನೀರಿಲ್ಲದೆ ಸುಮಾರು 15 ದಿನ ಕಳೆದರೂ ಕೂಡ ಮೂಲಸೌಕರ್ಯಗಳಿಲ್ಲದೆ ಶಾಪಗ್ರಸ್ತವಾದ ರಾಯಪುರದ ಮ್ಯಾಸರಹಟ್ಟಿ ಗ್ರಾಮ.
WhatsApp Group Join Now
Telegram Group Join Now

ಮೊಳಕಾಲ್ಮೂರು :- ಇಡೀ ರಾಜ್ಯದ್ಯಂತ ಮಳೆಯಾಗಿದೆ ಹಳ್ಳ ಕೊಳ್ಳೆಗಳು ತುಂಬಿ ಹರಿಯುತ್ತಿವೆ ಆದರೆ ಈ ಗ್ರಾಮಕ್ಕೆ ಮಾತ್ರ ಬಳಸಲು ಕುಡಿಯಲು ನೀರಿಲ್ಲದೆ ಅಧಿಕಾರಿಗಳ ವಿರುದ್ಧ ಇಡೀ ಶಪ ಹಾಕುತ್ತಿದ್ದಾರೆ. ಹೌದು ತಾಲೂಕಿನ ರಾಯಪುರ ಗ್ರಾಮ ಪಂಚಾಯಿತಿಗೆ ಸೇರಿದ ಮ್ಯಾಸರಟ್ಟಿ ಗ್ರಾಮ ಸುಮಾರು ಅಂದಾಜು 200 ಮನೆಗಳಿದ್ದು ಈ ಗ್ರಾಮಕ್ಕೆ ಮಾತ್ರ ಮೂಲಸೌಕರ್ಗಳಿದ್ದರೂ ಕೂಡ ಇಲ್ಲದಂತಾಗಿದೆ ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ತಾಲೂಕ ಆಡಳಿತ ಈ ಗ್ರಾಮದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಅನೇಕ ಕುಟುಂಬಗಳಿಗೆ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಬೀದಿ ದೀಪಗಳಿಲ್ಲದೆ ಊರು ಕತ್ತಲಾಗಿದೆ .

ಸುಮಾರು 15 ದಿನಗಳಿಂದ ನೀರು ಬಿಟ್ಟಿಲ್ಲ ಬಳಸಲು ಬಿಟ್ಟಿರುವ ನೀರು ಕುಡಿಯಲು ಯೋಗ್ಯವಲ್ಲ ಚರಂಡಿಗಳು ತುಂಬಿ ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ ಉಳ್ಳವರು ಬೈಕ್ಗಳಲ್ಲಿ ಹೋಗಿ ನೀರು ತರುತ್ತಾರೆ ಸ್ವಾಮಿ ನಾವು ಬಡವರು ನಮಗೆ ತರಲು ಆಗುವುದಿಲ್ಲ ಬಟ್ಟೆ ಒಗಿವ ನೀರನ್ನೆ ನಾವು ಕುಡಿಯುತ್ತೇವೆ ಎಂದು ಇಲ್ಲಿನ ಮಹಿಳೆಯರು ಆಕ್ರೋಶವನ್ನು ಹೊರಹಾಕಿದರು. ಕುಡಿಯಲು ನೀರು ಬೇಕೆಂದರೆ ತೋಟಗಳಿಗೆ ಹೋಗಬೇಕು ಹೋಗಲು ಕೂಡ ಜಾಗವಿಲ್ಲದೆ ರಸ್ತೆ ದಾಟುವಾಗ ಸಾವನ್ನಪ್ಪಿರುವ ಘಟನೆ ಕೂಡ ನಡೆದಿದೆ.

ಓವರ್ ಎಡಿ ಟ್ಯಾಂಕುಗಳಲ್ಲಿ ಮಣ್ಣು ತುಂಬಿ ಕಬ್ಬು ನಾರುತ್ತಿದೆ ಸ್ವಚ್ಛತೆಯೇ ಇಲ್ಲದ ಈ ಊರಲ್ಲಿ ಯಾವೊಬ್ಬ ಅಧಿಕಾರಿಯೂ ಕೂಡ ತಿರುಗಿ ನೋಡುತ್ತಿಲ್ಲ.ಗ್ರಾಮ ಪಂಚಾಯತಿ ಪಿಡಿಒ ತಾಲೂಕು ಆಡಳಿತ ಜನಪ್ರತಿನಿಧಿಗಳು ಇತ್ತ ಗಮನಹರಿಸದಿದ್ದಲ್ಲಿ ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಮತ್ತು ರಸ್ತೆ ತಡೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿಲ್ಕ್ ಪಾಪಯ್ಯ, ಸಣ್ಣ ಪಾಲಯ್ಯ, ಓಬಮ್ಮ ಶಾಂತಮ್ಮ ಮಲ್ಲಮ್ಮ ಹಟ್ಟಿ ಮಲ್ಲಯ್ಯ , ದೆಗ್ೋಬಯ್ಯ ಕೇದಾರೇಶ್ವರ ಅಜ್ಜಿನ ಮುತ್ತಯ್ಯ ಸಣ್ಣಯ್ಯ ಮೆಂಬರ್ ಪಾಲಯ್ಯ, ವಿರುಪಾಕ್ಷಿ, ಲಲಿತಮ್ಮ ಮಾರಕ್ಕ ಸಣ್ಣ ಕುಂಚಲಯ್ಯ ಪಾಲಯ್ಯ ಬಿಕೆ ಉಮೇಶ್ ಊರಿನ ಗ್ರಾಮಸ್ಥರು ಮಹಿಳೆಯರು ಇನ್ನೂ ಹಲವರು ಉಪಸ್ಥಿತರಿದ್ದರು.

ವರದಿ:- ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!