————————————————————————————————–ಇರಾನ್ಗೆ ಮತ್ತೇ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಫ್
ಯುಎಸ್- ಇಸ್ರೇಲ್- ಇರಾನ್ ವಾರ್ಗೆ ಸಂಬAಧಿಸಿದAತೆ ತಾತ್ಕಾಲಿಕ ಕದನ ವಿರಾಮ ಮುಕ್ತಾಯಗೊಳ್ಳಲು ಕೆಲವೇ ಘಂಟೆಗಳು ಉಳಿದಿರುವ ಸಂದರ್ಭದಲ್ಲಿ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಫ್ ಮತ್ತೇ ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ.
ಅವರ (ಇರಾನ್) ಬಳಿ ಬೇರೆ ಆಯ್ಕೆಗಳೇ ಇಲ್ಲ. ಶಾಸ್ವತವಾಗಿ ಯುದ್ದ ನಿಲ್ಲಲು ಇರಾನ್ ಷರತ್ತುಗಳಿಗೆ ಒಪ್ಪಲೇ ಬೇಕು. ಇಲ್ಲ ಎಂದರೆ ಸೇನಾ ಕಾರ್ಯಾಚರಣೆ ಎದುರಿಸಲಿ ಎಂದು ಮತ್ತೊಮ್ಮೆ ಇರಾನ್ಗೆ ಡೋನಾಲ್ಡ್ ಟ್ರಂಫ್ ಅವರು ಎಚ್ಚರಿಕೆ ನೀಡಿದ್ದಾರೆ.
ತಾತ್ಕಾಲಿಕ ಕದನ ವಿರಾಮ ಮುಕ್ತಾಯಗೊಳ್ಳುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ್ದಲ್ಲಿ ಶಾಂತಿ ಮಾತು ಕತೆಯ ಕೊನೆಯ ಪ್ರಯತ್ನಗಳು ಸಾಗಿವೆ. ಆದರೆ ಇರಾನ್ ಕೂಡ ಅಮೇರಿಕ ಹೇಳಿರುವ ಷರತ್ತುಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಪಶ್ಚಿಮ ಏಷ್ಯಾ ಸಂಘರ್ಷ ಇನ್ನು ಶಮನಗೊಳ್ಳುವ ಲಕ್ಷಣಗಳನ್ನು ತೋರುತ್ತಿಲ್ಲ.




