—————–ತಿಲಕ್ ವರ್ಮಾ (ಅಜೇಯ) ೧೦೧ (೪೫ ಎಸೆತ, ೮ ಬೌಂಡರಿ, ೭ ಸಿಕ್ಸರ್)
ಅಹ್ಮದಾಬಾದ್: ಐಪಿಎಲ್ ಪಂದ್ಯಾವಳಿಯಲ್ಲಿ ಉಳಿದುಕೊಳ್ಳಬೇಕಾದರೆ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ೯೯ ರನ್ಗಳ ಸುಲಭ ಗೆಲುವು ಪಡೆದು ನಿಟ್ಟುಸಿರು ಬಿಟ್ಟಿದೆ.
ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅದ್ಭುತ ಹಾಗೂ ವೇಗದ ಶತಕ ಸಿಡಿಸಿದರು. ಪರಿಣಾಮ ಮುಂಬೈ ೧೯೯ ರನ್ಗಳ ಉತ್ತಮ ಮೊತ್ತ ಕಲೆ ಹಾಕಿತು. ನಂತರ ಬೌಲರುಗಳು ತೋರಿದ ಉತ್ತಮ ಪ್ರದರ್ಶನದಿಂದ ಮುಂಬೈ ಅಂತೂ ಇಂತೂ ಗೆಲುವಿನ ಲಯಕ್ಕೆ ಮರಳಿದೆ.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ ೨೦ ಓವರುಗಳಲ್ಲಿ ೫ ವಿಕೆಟ್ಗೆ ೧೯೯
ತಿಲಕ್ ವರ್ಮಾ (ಅಜೇಯ) ೧೦೧ (೪೫ ಎಸೆತ, ೮ ಬೌಂಡರಿ, ೭ ಸಿಕ್ಸರ್)
ನಮನ್ ಧೀರ್ ೪೫ (೩೨ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಕಗಿಸೋ ರಬಾಡಾ ೩೩ ಕ್ಕೆ ೩.
ಗುಜರಾತ್ ಟೈಟನ್ಸ್ ೧೫.೫ ಓವರುಗಳಲ್ಲಿ ೧೦೦
ವಾಷಿಂಗ್ಟನ್ ಸುಂದರ್ ೨೬ (೧೭ ಎಸೆತ, ೫ ಬೌಂಡರಿ)
ಅಶ್ವನಿ ಕುಮಾರ್ ೨೪ ಕ್ಕೆ ೪, ಮಿಚೆಲ್ ಸ್ಯಾಂಟ್ನರ್ ೧೬ ಕ್ಕೆ ೨




