ನವದೆಹಲಿ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಹಾಗೂ ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಔಷಧಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಅಗತ್ಯ ಔಷಧಗಳ ಬೆಲೆಯನ್ನು 10 ರಿಂದ 20 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಸರ್ಕಾರದ ಬೆಲೆ ನಿಯಂತ್ರಣ (Price Control) ವ್ಯಾಪ್ತಿಗೆ ಬರುವ ಅತ್ಯಗತ್ಯ ಔಷಧಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯವಾಗಿ ಕ್ಯಾನ್ಸರ್ ಚಿಕಿತ್ಸೆಯ ಔಷಧಗಳು, ವಿವಿಧ ರೋಗಗಳಿಗೆ ಬಳಸುವ ಆಂಟಿಬಯೋಟಿಕ್ಸ್, ಜೀವ ರಕ್ಷಕ ಇಂಜೆಕ್ಷನ್ಗಳು, ಈ ಬೆಲೆ ಏರಿಕೆಯು ಕೇವಲ ತಾತ್ಕಾಲಿಕವಾಗಿದ್ದು, ಪ್ರಾಥಮಿಕವಾಗಿ 3 ತಿಂಗಳ ಅವಧಿಗೆ ಮಾತ್ರ ಅನ್ವಯವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.




