Ad imageAd image

ನಿಂತಿದ್ದ ಲಾರಿಗೆ ಕೋಳಿ ಸಾಗಿಸುತ್ತಿದ್ದ ವಾಹನ ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು 

Bharath Vaibhav
ನಿಂತಿದ್ದ ಲಾರಿಗೆ ಕೋಳಿ ಸಾಗಿಸುತ್ತಿದ್ದ ವಾಹನ ಡಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು 
WhatsApp Group Join Now
Telegram Group Join Now

ಬೆಳಗಾವಿ: ರಾಜ್ಯದಲ್ಲಿ ರಣ ಬಿಸಿಲ ನಡುವೆ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿದ್ದು, ನಿಂತಿದ್ದ ಲಾರಿಗೆ ಕೋಳಿ ಸಾಗಿಸುತ್ತಿದ್ದ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿಯಲ್ಲಿ ಈ ದುರಂತ ಸಂಭವಿಸಿದೆ.

ಕೊಲ್ಲಾಪುರದಿಂದ ಶಿವಮೊಗ್ಗದ ಸೊರಬಕ್ಕೆ ಕೋಳಿ ತುಂಬಿದ ಗೂಡ್ಸ್ ವಾಹನ ಹೊರಟ್ಟಿತ್ತು.ಈ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ವಾಹನ ಡಿಕ್ಕಿಯಾಗಿದೆ. ‌ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ನೂರಾರು ಕೋಳಿಗಳು ಸಹ ಸಾವನ್ನಪ್ಪಿವೆ.

ಮೃತರನ್ನು ವಾಸಿಂಮ್ (28) ಮುಬಾರಕ್ (22) ಎಂದು ಗುರುತಿಸಲಾಗಿದೆ. ವಾಹನ ಚಾಲಕ ಬಸವರಾಜ್ ಈರಪ್ಪ ಹಂಚಿನಮನಿ (37) ಸ್ಥಿತಿ ಗಂಭಿರವಾಗಿದೆ.ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಎಸ್‌ಐ ಅವಿನಾಶ್ ಸೇರಿ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ಗಾಯಾಳುವನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!