Ad imageAd image

ಅಪ್ರಾಪ್ತ ಬಾಲಕಿ ಮೇಲೆ ರೇಪ್ ಕೇಸ್ : ಇಬ್ಬರು ಯುವಕರು ಅರೆಸ್ಟ್

Bharath Vaibhav
ಅಪ್ರಾಪ್ತ ಬಾಲಕಿ ಮೇಲೆ ರೇಪ್ ಕೇಸ್ : ಇಬ್ಬರು ಯುವಕರು ಅರೆಸ್ಟ್
RAPE
WhatsApp Group Join Now
Telegram Group Join Now

ಬೆಳ್ತಂಗಡಿ : ಬೆಳ್ತಂಗಡಿ ಅಪ್ರಾಪ್ತ ಬಾಲಕಿ ಮೇಲೆ ರೇಪ್ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಸುಮಂತ್ (28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್ (26) ಬಂಧಿತರು ಎಂದು ಗುರುತಿಸಲಾಗಿದೆ.

15 ವರ್ಷದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಯುವಕರು ಪುಸಲಾಯಿಸಿ ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಏ.16 ರಂದು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಬಗ್ಗೆ ಮನೆಯವರಿಗೆ ಬಾಲಕಿ ತಿಳಿಸಿದ್ದಳು. ಅದರಂತೆ ಪೋಷಕರು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ತನಿಖೆ ನಡೆಸಿ ಅತ್ಯಾಚಾರ ಎಸಗಿದ ಸುಮಂತ್ ಹಾಗೂ ನವನೀತ್‌ನನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಈ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾದ ಓರ್ವ ಆರೋಪಿ ಕಡುರುದ್ಯಾವರ ಗ್ರಾಮದ ಸುಮಂತ್ ಗೆ ಮೇ.10ರಂದು ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು ಮದ್ವೆ ಆಗುವ ಮುನ್ನವೇ ಈಗ ಕಂಬಿಹಿಂದೆ ಬಿದಿದ್ದಾನೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!