Ad imageAd image

ಯೋಗದಿಂದ ಉತ್ತಮ ಆರೋಗ್ಯ: ಡಾ.ಅಲ್ಲಮಪ್ರಭು ಗುಡ್ಡಾ

Bharath Vaibhav
ಯೋಗದಿಂದ ಉತ್ತಮ ಆರೋಗ್ಯ: ಡಾ.ಅಲ್ಲಮಪ್ರಭು ಗುಡ್ಡಾ
WhatsApp Group Join Now
Telegram Group Join Now

ಅನಂತ ಬಿರಾದಾರ ನೇತೃತ್ವ | ಏಶಿಯಾ ಬುಕ್ ಆಫ್ ರೇಕಾರ್ಡ್ನಲ್ಲಿ ದಾಖಲಾದ ಬೀದರನಲ್ಲಿ ನಡೆದ ಯೋಗ ಮಹೋತ್ಸವ 5326 ಜನ ಭಾಗಿ

ಬೀದರ : ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದ್ದು, ಪ್ರತಿಯೊಬ್ಬರು ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಭಾರತ ಸರ್ಕಾರದ ಆಯುರ್ವೇದ ಬೋರ್ಡ್ ಅದ್ಯಕ್ಷರಾದ ಡಾ.ಅಲ್ಲಮಪ್ರಭು ಗುಡ್ಡಾ ಹೇಳಿದರು.

ನಗರದ ಗುರುನಾನಕ್ ದೇವ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಭಾರತ ಸರ್ಕಾರದ ಆಯುಶ್ ಇಲಾಖೆಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೆಶನ್, ಸೂರ್ಯ ಫೌಂಡೇಷನ್ ನೇತೃತ್ವದಲ್ಲಿ ಹಾಗೂ ಗುರುನಾನಕ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಪ್ರಧಾ‌ನಮಂತ್ರಿ ನರೇಂದ್ರ ಮೋದಿ ಅವರು ಆಯುಶ್ ಇಲಾಖೆಗೆ ಹೆಚ್ಚಿನ‌ ಒತ್ತು ನೀಡುತಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಈ ನಿಟ್ಟಿನಲ್ಲಿಯೆ ಈ ತರಹದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.ಯೋಗ ಸರ್ಟಿಫಿಕೇಶನ್ ಬೋರ್ಡ್ ಸದಸ್ಯರು ಹಾಗೂ ಐ.ಎನ್.ಓ ಅಧ್ಯಕ್ಷರಾದ ಅನಂತ ಬಿರಾದಾರ ಅವರು ಮಾತನಾಡಿ ಪದ್ಮಶ್ರೀ ಜಯಪ್ರಕಾಶ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ಐ.ಎನ್.ಓ ಹಾಗೂ ಸೂರ್ಯ ಫೌಂಡೇಶನ್ ವತಿಯಿಂದ ದೇಶಾದ್ಯಂತ ಆರೋಗ್ಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಜಿಕ ಚಟುವಟಿಕೆಗಳನ್ನ ನಿರಂತರವಾಗಿ ಮಾಡುವುದರ ಜೊತೆಗೆ ವಿಶೇಷವಾಗಿ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸಾ ಪದ್ದತಿ ಬಗ್ಗೆ ಜನರಿಗೆ ಆರೋಗ್ಯಕರ ಜೀವನ ನಡೆಸಲು ಅನೇಕ ಜಾಗೃತಿ ಕಾರ್ಯಗಳನ್ನು ಮಾಡುತ್ತಿದೆ ಅದರಲ್ಲಿ ಈ ಯೋಗ ಮಹೋತ್ಸವ ಕಾರ್ಯಕ್ರಮ ಕೂಡ ಒಂದಾಗಿದೆ ಎಂದರು.

ವಿಶ್ವಯೋಗ ದಿನಾಚರಣೆಗು ಮುನ್ನ ದೇಶಾದ್ಯಂತ ನೂರು ಕಡೆ ಯೋಗ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ ಕರ್ನಾಟಕ ರಾಜ್ಯದ ಬೀದರನಲ್ಲಿ ಮಾತ್ರ ಈ ಕಾರ್ಯಕ್ರಮ ನಡೆದಿದೆ ಮತ್ತು ಒಂದು ನಿಮಿಷಗಳ ಕಾಲ 5326 ಜನ ಏಕಕಾಲಕ್ಕೆ ತಾಡಾಸನ ಮಾಡುವುದರ ಮೂಲಕ ಏಶಿಯಾ ಬುಕ್ ಆಫ್ ರೇಕಾರ್ಡನಲ್ಲಿ ದಾಖಲಾಗಿಸಿದೆ ಈ ಪ್ರಯುಕ್ತ ಐ.ಎನ್.ಓ, ಸೂರ್ಯ ಫೌಂಡೇಶನ್ ಹಾಗೂ ಗುರುನಾನಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಂಸ್ಥೆಗಳಿಗೆ ಪ್ರಶಸ್ತಿ ಪತ್ರ, ಮೇಡಲ್ ಹಾಗೂ ವಿಶೇಷ ಪೇನ್ ನೀಡಿ ರೇಕಾರ್ಡ್ ಸಮಿತಿಯ ಸದಸ್ಯರು ಹಾಗೂ ಅನಂತ ಬಿರಾದಾರ ಅವರು ಗೌರವಿಸಿದರು.

ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ ರೋಗ ಮುಕ್ತ, ಸ್ವಸ್ಥ-ಸುಸ್ಥಿರ ಹಾಗೂ ಸಶಕ್ತ ಸಮಾಜ ನಿರ್ಮಾಣಕ್ಕೆ ಯೋಗ ಪ್ರತಿಯೊಬ್ಬರಿಗು ಅತ್ಯವಶ್ಯಕವಾಗಿದೆ, ವಿಶ್ವದ ಅನೇಕ ರಾಷ್ಟ್ರಗಳು ಈಗ ಯೋಗದ ಮೊರೆ ಹೋಗಿವೆ ವಿದೇಶಗಳಿಂದ ಅನೇಕ ದಿನಗಳನ್ನು ನಾವು ಅಳವಡಿಸಿಕೊಂಡಿದ್ದೆವೆ ಆದರೆ ಭಾರತ ದೇಶವು ಯೋಗವನ್ನು ಜಗತ್ತಿಗೆ ನೀಡಿದೆ ಮತ್ತು ಇದು ಬಹುದೊಡ್ಡ ಕೊಡುಗೆಯಾಗಿದೆ ಹೀಗಾಗಿ ಎಲ್ಲರು ಕಾಯಕದ ಜೊತೆಗೆ ಯೋಗ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.

ಗುರುನಾನಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಉಪಾದ್ಯಕ್ಷರಾದ ಡಾ.ರೇಶ್ಮಾ ಕೌರ್ ಅವರು ಮಾತನಾಡಿ ಯೋಗವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ ನಮಲ್ಲಿ ಕಾಣಿಸಿಕೊಳ್ಳುವ ಅನೇಕ ರೋಗಗಳಿಗೆ ಪರಿಹಾರವನ್ನೂ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸೆಯಿಂದ ಕಂಡುಕೊಳ್ಳಬಹುದು ಆಧುನಿಕ ಒತ್ತಡದ ಬದುಕಿನಲ್ಲಿ ಬಹುತೇಕರಿಗೆ ಜೀವನವೇ ಸಾಕು ಎಂಬ ಭಾವ ಮೂಡುತ್ತಿದೆ ಆದರೆ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸೆಯು ಈ ಎಲ್ಲ ಒತ್ತಡಗಳನ್ನು ತಡೆದು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ಇದಕ್ಕೆ ಬಹಳ ಮಹತ್ವ ನೀಡುವುದು ಜೊತೆಗೆ ಈ ತರಹದ ಸಮಾಜಮುಖಿ ಕೆಲಸಗಳಿಗೆ ಸದಾಕಾಲ ಬೆನ್ನೆಲುಬಾಗಿ ನಿಲ್ಲುವುದರ ಜೊತೆಗೆ ಕ್ಯೂಬಿಕ್ಸ್ ಸ್ಪರ್ದೇಯಲ್ಲಿ ಗಿನ್ನಿಸ್ ರೇಕಾರ್ಡ ದಾಖಲೆಯನ್ನು ತನ್ನದಾಗಿಸಿಕೊಂಡಿದೆ ಈಗ ಭವ್ಯವಾದ ಯೋಗ ಮಹೋತ್ಸವ ಕಾರ್ಯಕ್ರಮ ಮಾಡುವುದರ ಮೂಲಕ ಏಶಿಯಾ ಬುಕ್ ಆಫ್ ರೇಕಾರ್ಡ್ ಕೂಡ ತನ್ನದಾಗಿಸಿಕೊಂಡಿದೆ ಇದು ಸಂಸ್ಥೆಗೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಭಾರತ ಸರ್ಕಾರದ ಆಯುಶ್ ಇಲಾಖೆಯ ಮಾರ್ಗಸೂಚಿಯನ್ವಯ ಯೋಗವನ್ನ ಪತಂಜಲಿಯ ಕರ್ನಾಟಕದ ಪ್ರಭಾರಿಗಳಾದ ಭವರಲಾಲ್ ಆರ್ಯ ಅವರು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.

ಶ್ರೀ ಸಿದ್ದರಾಮೇಶ್ವರ ಆಯುರ್ವೇದ ಮೇಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಯೋಗಪಟು ಆನಂದ ಅವರ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಯೋಗ ದಿನಾಚರಣೆಯ ಪ್ರಚಾರ ಹಾಗೂ ಪ್ರಸಾರಕ್ಕಾಗಿ 63 ದಿನ ಮಂಚಿತವಾಗಿ ಜಿಲ್ಲೆಯಲ್ಲಿ ಐ.ಎನ್.ಓ ಹಾಗೂ ಸೂರ್ಯ ಫೌಂಡೇಶನ್ ಹಮ್ಮಿಕೊಂಡ ಯೋಗ ಮಹೋತ್ಸವದಲ್ಲಿ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಜಿಲ್ಲೆಯ ವಿವಿಧ ತಾಲ್ಲೂಕಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು, ರಾಜಕೀಯ ನಾಯಕರು, ಹಾಗೂ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದರು. ಆಯುಶ್ ಇಲಾಖೆ ಸಚಿವರಾದ ಪ್ರತಾಪರಾವ ಜಾಧವ ಅವರು ವಿಡಿಯೋ ಸಂದೇಶದ ಮೂಲಕ ಐ.ಎನ್.ಓ ಸಂಸ್ಥೆಯ ಕಾರ್ಯ ಶ್ಲಾಘಿಸಿ ಎಲ್ಲರು ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಆಶ್ರಮದ ಪ್ರತಿಮಾ ಬೆಹೆನಜಿ, ಗುರುನಾನಕ ಸಂಸ್ಥೆಯ ಅದ್ಯಕ್ಷರಾದ ಡಾ.ಸರ್ದಾರ್ ಬಲಬೀರಸಿಂಗ್, ನಿರ್ದೇಶಕರಾದ ಸರ್ದಾರ್ ಪವಿತ್ ಸಿಂಗ್, ಬಿಜಿಪಿ ಜಿಲ್ಲಾದ್ಯಕ್ಷರಾದ ಸೋಮನಾಥ ಪಾಟೀಲ,ಬಾಬುರಾವ ಕಾರಬಾರಿ, ಗುರುನಾಥ ಜ್ಯಾಂತಿಕರ್, ರಾಜಶೇಖರ ನಾಗಮೂರ್ತಿ, ಐ.ಎನ್.ಓ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ರಾಜ್ಯ ಸಂಚಾಲಕ ಗುರುನಾಥ
ರಾಜಗೀರಾ, ರಾಜ್ಯ ಕಾರ್ಯದರ್ಶಿ ಯೋಗೆಂದ್ರ ಯದಲಾಪುರೆ, ರಾಜ್ಯ ಕೋಶಾದ್ಯಕ್ಷರಾದ ಡಾ.ಮನ್ಮತಯ್ಯಾ ಸ್ವಾಮಿ, ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ, ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಸಂಚಾಲಕಿ ಡಾ.ಮಂಜುಳಾ ಮುಚಳಂಬೆ, ಉಪಾಧ್ಯಕ್ಷರಾದ ರೂಪಾ ಪಾಟೀಲ, ಉಮಾದೇವಿ ರೂಗನ್, ಸೇರಿದಂತೆ ಶಿಕ್ಷಣ ಸಂಸ್ಥೆಗಳ ಪ್ರಮುಖರಾದ ಡಾ.ರೂಪೇಶ ಎಕಲಾರಕರ್, ಪೂರ್ಣಿಮಾ ಜಿ, ಡಾ.ಹಾವಗಿರಾವ ಮೈಲಾರೆ, ವಿವೇಕ ಜಲಾದೆ, ಡಾ.ಸುರೇಖಾ, ಲಗ್ಮನ್ನವರ, ಶಿವಕುಮಾರ ಸ್ವಾಮಿ, ವೇಣುಗೋಪಾಲ ಶೀಲವಂತ, ಜೈ ಗುರುದೇವ ಯೋಗ ಚಾರಿಟೇಬಲ್ ಟ್ರಸ್ಟ ಭಾಲ್ಕಿ ಅಜಯಕುಮಾರ ದುಬೆ ಸೇರಿದಂತೆ ಐ.ಎನ್.ಓ, ಐ.ಎನ್.ಓ ರಾಷ್ಟ್ರೀಯ ಸಹ ಕಾರ್ಯದರ್ಶಿ ತ್ರಿಭುವನ ಸಿಂಗ ಪತಂಜಲಿ, ಆರ್ಟ ಆಫ್ ಲಿವಿಂಗ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿದ್ದರು.

ವರದಿ: ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!