Ad imageAd image

ವಕ್ಫ್ ಗೊಂದಲ ಸರ್ಕಾರದ ಆಡಳಿತ ವೈಫಲ್ಯ

Bharath Vaibhav
ವಕ್ಫ್ ಗೊಂದಲ ಸರ್ಕಾರದ ಆಡಳಿತ ವೈಫಲ್ಯ
WhatsApp Group Join Now
Telegram Group Join Now

ಹುಬ್ಬಳ್ಳಿ :- ವಕ್ಪ್ ಆಸ್ತಿ ಬಗ್ಗೆ ನೋಟಿಸ್ ಕೊಟ್ಟಿದ್ದು ಸರ್ಕಾರದ ಅವ್ಯವಸ್ಥೆಗೆ ಇದು ಸ್ಪಷ್ಟ ಉದಾಹರಣೆ ಎಂದು ಮಾಜಿ ಸಿಎಂ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ವಕ್ಫ್ ಗೊಂದಲದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೋಟಿಸ್ ಕೊಟ್ಟಿದ್ದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ.ಇದನ್ನು ಯಾರು ಕೇಳದಿದ್ದ್ರೆ ಅದು ವಕ್ಪ್ ಬೋರ್ಡ್ ಆಸ್ತಿ ಆಗುತ್ತಿತ್ತು.ಬೋರ್ಡ್‌ಗೆ ಆಸ್ತಿ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಹೀನ ಮಟ್ಟಕ್ಕಿಳಿದೆ ಎಂದರು.

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರತಿ ಬಾರಿ ತಪ್ಪು ಹೆಜ್ಜೆ ಇಡುತ್ತಿದೆ
ಈ ಕೂಡಲೇ ರೈತರಿಗೆ ನೀಡಿರುವ ನೋಟಿಸ್ ವಾಪಸು ಪಡೆಯಬೇಕು.
ರೈತರ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.
ಇದು ರೈತರ ಜಮೀನು ಕಬಳಿಸುವ ತಂತ್ರ ಎಂದ ಶೆಟ್ಟರ್
ಇದರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ನಮ್ಮ ಕಾಲದಲ್ಲಿ ಒಂದೋ ಎರಡು ಪ್ರಕರಣ ಆಗಿರಬಹುದು ಅದನ್ನು ಸ್ಥಳಿಯ ಅಧಿಕಾರಿಗಳನ್ನು ಕೇಳಬೇಕು. ರೈತರ ಹಿತಾಸಕ್ತಿ ಕಾಪಾಡಲು, ತುಷ್ಟಿಕರಣ ಖಂಡಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಸಾಬೀತು ಆಗಿದೆ.

ಪ್ರಾಥಮಿಕವಾಗಿ ತಪ್ಪಾಗಿದೆ ಎಂದ ಶೆಟ್ಟರ್.
ಇಡಿ ಅವರಿಗೆ ಸಿದ್ದರಾಮಯ್ಯ ಕುಟುಂಬಸ್ಥರು ಮತ್ತು ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಇಡಿ ಅವರು ಬಂದರೆ ಮಾಹಿತಿ ನೀಡದೆ ಓಡಿ ಹೋಗುತ್ತಿದ್ದಾರೆ.ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.ಇಡಿ ಅವರು ಬಂದರೆ ಮಾಹಿತಿ ನೀಡದೆ ಓಡಿ ಹೋಗುತ್ತಿದ್ದಾರೆ ಎಂದ ಶೆಟ್ಟರ್ ಹೇಳಿದರು.

ವರದಿ:-  ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!