ನವದೆಹಲಿ : ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ವಿರುದ್ಧ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರ ಸಂವಿಧಾನ ಮತ್ತು ಜನರ ಹಕ್ಕುಗಳಿಗಾಗಿ ಹೋರಾಡುವುದನ್ನು ಮುಂದುವರಿಸುತ್ತದೆ ಎಂದರು.
ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಭಾರತದ ಸಂವಿಧಾನವನ್ನು ಬದಲಾಯಿಸುವ ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದಾರೆ. 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಜನರು ಈ ಯೋಜನೆಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತ ನಡೆಸುವ ಸಿದ್ದಾಂತವನ್ನು ಬದಲಾಯಿಸಿ ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿದ ನಾಥೂರಾಮ್ ಗೋಡ್ಸೆಯವರ ಸಿದ್ದಾಂತದೊಂದಿಗೆ ಬದಲಾಯಿಸಲು ಉದ್ದೇಶಿಸಲಾಗಿದೆಯೇ ಎಂದು ಪ್ರಮೋದ್ ತಿವಾರಿ ತಿಳಿಸಿದರು.
ಭಾರತದಲ್ಲಿ ಗೋಡ್ಸೆ ಸಿದ್ದಾಂತ ತರುವ ಪ್ಲಾನ್ ಅನ್ನು ಬಿಜೆಪಿ ಮಾಡಿದೆ. ಈ ಮೂಲಕ ದೇಶದ 140 ಕೋಟಿ ಜನರಿಗೆ ಸಮಾನತೆ ಹಕ್ಕನ್ನು ನಿರಾಕರಿಸಲಾಗುತ್ತಿದೆಯೇ.? ಬಂಡವಾಳಶಾಹಿಗಳಿಗೆ ಶ್ರೀಮಂತರಿಗೆ ಮಾತ್ರ ಜಗತ್ತು ನಿರ್ಮಾಣವಾಗುತ್ತದೆಯೇ ಎಂದು ತಿವಾರಿ ಪ್ರಶ್ನಿಸಿದರು.
ಭಾರತೀಯ ಸಂವಿಧಾನ ಸಮಾಜವಾದಿ ಮತ್ತು ಗಾಂಧಿ ತತ್ವಗಳ ಅಡಿಪಾಯದಲ್ಲಿ ನಿಂತಿದೆ. ಅದನ್ನು ಯಾರೂ ಕೂಡ ಏನು ಮಾಡಲು ಸಾಧ್ಯವಿಲ್ಲ.
ಆದರೆ ಬಿಜೆಪಿ ಹಾಗೂ ಅದರ ಸೈದಂತಿಕ ಮಿತ್ರ ಪಕ್ಷಗಳು ಸಂವಿಧಾನವನ್ನು ಬದಲಾಯಿಸುವ ಮೂಲಕ ಮೀಸಲಾತಿ ಕೊನೆಗಾಣಿಸಲು ಪ್ರಯತ್ನಿಸುತ್ತಿದೆ. ಹಾಗೆ ಕೆಲವರ ಕೈಯಲ್ಲೇ ಪಕ್ಷದ ಅಧಿಕಾರವನ್ನು ಕೇಂದ್ರಿಕರಿಸಲು ಪ್ಲಾನ್ ಮಾಡುತ್ತಿದೆ ಎಂದರು.




