Ad imageAd image

ಜಾತಿ ನಿಂದನೆ ಮಾಡಿದ ರಮೇಶ ಕತ್ತಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ!

Bharath Vaibhav
ಜಾತಿ ನಿಂದನೆ ಮಾಡಿದ ರಮೇಶ ಕತ್ತಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ!
WhatsApp Group Join Now
Telegram Group Join Now

ಸಿಂಧನೂರು: ಅ ೨೧ ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ರಮೇಶ್ ಕತ್ತಿ”
ಬೇಡರ ವಾಲ್ಮೀಕಿ ಸಮುದಾಯವನ್ನು ಕುರಿತು ಬೇಡರ ಸೂಳೆಮಕ್ಕಳು ಎಂಬ ಅವಾಚ್ಯ
ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದು ಇದರಿಂದ ವಾಲ್ಮೀಕಿ ಸಮುದಾಯದ ಮನಸ್ಸಿಗೆ ತೀವ್ರ ಘಾಸಿ ಯಾಗಿದೆ ಎಂದು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕ ಅಧ್ಯಕ್ಷ ಆರ್. ತಿಮ್ಮಯ್ಯ ನಾಯಕ ತಿಳಿಸಿದರು.

ನಂತರ ಅವರು ಮಾತನಾಡಿ ನಮ್ಮ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ಅವಧೂಗಿಸಿದ್ದು ಅಲ್ಲದೆ ಇವರು ಸತತವಾಗಿ ವಾಲ್ಮೀಕಿ ಸಮುದಾಯಕ್ಕೆ ಅವಹೇಳನಕಾರಿಯಾಗಿ ಬಿಂಬಿಸುವ ಕೆಲಸ ಮಾಡುತ್ತಾ ನಮ್ಮ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಈತನ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ನಗರದ ಪ್ರವಾಸಿ ಮಂದಿರದಿಂದ ತೆರಳಿ ಗಾಂಧಿ ವೃತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಓಬಳೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯಕ್, ಕುಪೇಂದ್ರಪ್ಪ ನಾಯಕ್, ನಾಗರಾಜ್ ನಾಯಕ್ , ವೆಂಕಟೇಶ್ ನಾಯಕ್ ರಾಗಲಪರ್ವಿ,ಮಲ್ಲಯ್ಯ ನಾಯಕ್,ವಿಶ್ವನಾಥ ನಾಯಕ್, ದೇವೇಂದ್ರಪ್ಪ ನಾಯಕ್, ಕುರುಕುಂದಿ ಕರೇಗೌಡ, ರಾಮಕೃಷ್ಣ ದೇವಿಕ್ಯಾಂಪ್, ಹನುಮಂತಪ್ಪ ಫುಲದಿನ್ನಿ, ಅರುಣ್ ಕುಮಾರ್ ನಾಯಕ್, ಸಿದ್ದು ನಾಯಕ್ ಗೊರೆಬಾಳ್, ಬಸವರಾಜ್ ನಾಯಕ್ ವಕೀಲ, ಯಂಕೋಬ ನಾಯಕ ರಾಮತ್ನಾಳ, ಬಿಎಚ್ ನಾಯಕ್, ಸೋಮನಾಥ್ ನಾಯಕ್ ಬೂತಲದಿನ್ನಿ , ಮೌನೇಶ್ ನಾಯಕ್ ಏಳುರಾಗಿ, ಉಪನ್ಯಾಸಕರಾದ ಬಸವರಾಜ ನಾಯಕ್, ದುರ್ಗಪ್ಪ ನಾಯಕ್, ಅಂಬರೀಶ ನಾಯಕ್, ಸೇರಿದಂತೆ ಅನೇಕ ಇದ್ದರು.

ವರದಿ: ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!