ರಾಮದುರ್ಗ : ತಾಲೂಕಿನ ಕಿತ್ತೂರಿನ ಉನ್ನತೀಕರಿಸಿದ ಸರ್ಕಾರಿ ಪ್ರೌಢ ಶಾಲೆಯ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶವು ಶೇಕಡಾ 100 ರಷ್ಟು ಆಗಿದೆ. ಪರೀಕ್ಷೆಗೆ ಹಾಜರಾದ ಎಲ್ಲ 32 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಸ್ವಾತಿ ಫಕೀರಪ್ಪ ಸಾವಳಗಿ 625 ಕ್ಕೆ 586 – 94% ಪ್ರಥಮ,ಕಾರ್ತಿಕ ಚಂದ್ರಶೇಖರ ಬಡಿಗೇರ 574 – 92% ದ್ವಿತೀಯ, ಸಾವಿತ್ರಿ ಈರಪ್ಪ ಜಾಮದಾರ 571-91.36% ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಸರ್ವ ಸದಸ್ಯರು ಹಾಗೂ ಕಿತ್ತೂರಿನ ಗ್ರಾಮಸ್ಥರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.




