ಗುರುಮಠಕಲ್: ಪ್ರಸ್ತುತ ಶಾಂತವೀರ ಎಸ್,ಎಸ್,ಎಲ್,ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಪೂಜ್ಯಶ್ರೀ ಶಾಂತವೀರ ಸ್ವಾಮಿ ಸ್ಮೃತಿ ಪ್ರೌಢ ಶಾಲೆಯ ವಿದ್ಯಾರ್ಥಿ ವಿದ್ಯಾಶ್ರೀ ವಿಶ್ವನಾಥ ೬೨೫ಕ್ಕೆ ೬೦೭(ಶೇ.೯೭.೧೨) ಅಂಕಗಳು ಪಡೆಯುವ ಮೂಲಕ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಮುಖ್ಯಗುರು ಬಂಗಾರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಗುರುಮಠಕಲ್ ಶಿಕ್ಷಣ ಸಂಸ್ಥೆ ಸಂಚಾಲಿತ ಅನುದಾನಿತ ಶಾಲೆಯಾಗಿರುವ ಪೂಜ್ಯಶ್ರೀ ಶಾಂತವೀರ ಸ್ವಾಮಿ ಸ್ಮೃತಿ ಪ್ರೌಢ ಶಾಲೆಯ ಎಸ್,ಎಸ್,ಎಲ್,ಸಿ ಪರೀಕ್ಷೆಯಲ್ಲಿ ೭೪ ವಿದ್ಯಾರ್ಥಿಗಳು ಹಾಜರಾಗಿದ್ದು,೭೩ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಯ ಫಲಿತಾಂಶ ಶೇ.೯೯ ಬಂದಿದೆ.೮ ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ ,೨೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ,೧೬ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ೨೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾಶ್ರೀ ವಿಶ್ವನಾಥ(ಶೇ.೯೭.೧೨),ಮಿನಾಕ್ಷಿ ಬಸಪ್ಪ (ಶೇ.೯೪.೦೮),ರಾಮಲಿಂಗಪ್ಪ ಹಣಮಂತ(ಶೇ.೯೧.೬೮),ಖುಷಿ ನಂದಕುಮಾರ(ಶೇ.೯೧.೫೨),ಸಾಕ್ಷಿರೆಡ್ಡಿ ಶಂಕರರೆಡ್ಡಿ(ಶೇ.೮೮),ನಾಗೇಶ ವೆಂಕಟಪ್ಪ (ಶೇ.೮೭.೮೪),ಅಕ್ಷಯಕುಮಾರ ಬುಗ್ಯನಾಯಕ(ಶೇ.೮೭.೫೨),ನಾಗಮ್ಮ ನರಸಪ್ಪ (ಶೇ.೮೭.೫೨),ಯಶೋಧ ರಮೇಶ (ಶೇ.೮೨.೫೬)
ವರದಿ : ರವಿ ಬುರನೋಳ್




