Ad imageAd image

 ರಾಜಗೋಪಾಲನಗರದಲ್ಲಿ ಅವತಾರ್ ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ವಸ್ತುಪ್ರದರ್ಶನ

Bharath Vaibhav
 ರಾಜಗೋಪಾಲನಗರದಲ್ಲಿ ಅವತಾರ್ ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ವಸ್ತುಪ್ರದರ್ಶನ
WhatsApp Group Join Now
Telegram Group Join Now

ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ರಾಜಗೋಪಾಲ ನಗರದ ಶ್ರೀ ರಾಮ ದೇವಸ್ಥಾನ ಬಳಿ ಇರುವ ಮುನಿಗಂಗಪ್ಪ ಆಟದ ಮೈದಾನದಲ್ಲಿ ಶ್ರೀ ಗುರು ಎಂಟರ್ಪೈಸಸ್ ವತಿಯಿಂದ ಒಂದು ತಿಂಗಳವರೆಗೂ ನೆಡೆಯಲಿರುವ ‘ಅವತಾರ್ ಅಮ್ಯೂಸ್ ಮೆಂಟ್’ ಪಾರ್ಕ್ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಕುಣಿಗಲ್ ಶಾಸಕ ಡಾ. ರಂಗನಾಥ್ ಮತ್ತು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ರಿಬ್ಬನ್ ಕತ್ತರಿ ಉದ್ಘಾಟಿಸಿದರು.

ಶಾಸಕ ಡಾ.ರಂಗನಾಥ್ ಮಾತನಾಡಿ ಅವತಾರ್ ಅವತರಿಣಿಕೆಯ ಅಮ್ಯೂಸ್ ಮೆಂಟ್ ಮತ್ತು ಇಲ್ಲಿನ ಆಟಿಕೆ ಪ್ರದರ್ಶನ ಸಾರ್ವಜನಿಕರಿಗೆ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ ಎಂದರು.

ಅರ್ ಅರ್ ನಗರ ಕ್ಷೇತ್ರದಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮಾತಾನಾಡಿ ಮೊದಲು ಸಿನಿಮಾದಲ್ಲಿ ಅವತಾರ್ ನೋಡಿದ್ದವೆ. ಆದರೆ ಒಂದು ವಿಶೇಷ ಕಲಾ ವಸ್ತುಗಳ ಪ್ರದರ್ಶನ ಮಕ್ಕಳಿಗೆ ಆಟಗಳು ಮನೋರಂಜನೆ ಪ್ರತಿಯೊಬ್ಬರು ಖುಷಿ ಪಡುವಂತೆ ಆಕರ್ಷಣೆ ಈ ವಸ್ತು ಪ್ರದರ್ಶನ ಎಂದು ಹೇಳಿದರು.

ಬಾ. ಸಂಗನ ಬಸಪ್ಪ ಬಿರಾದಾರ್ ಮತ್ತು ಬ.ನಾ ರವಿ ಮಾತನಾಡಿದರು.

ಈ ಸಂದರ್ಭದಲ್ಲಿ ಆರ್ ಆರ್ ಕ್ಷೇತ್ರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ರಾಂಪುರ ನಾಗೇಶ್, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ.ಸಂಗನಬಸಪ್ಪ ಬಿರಾದಾರ್, ಅಂದ್ರಹಳ್ಳಿ ವಿದ್ಯಾ ಭೂಷಣ್ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾಂಗ್ರೆಸ್ ಜಿಬಿಎ ಆಕಾಂಕ್ಷಿ ಅಭ್ಯರ್ಥಿ ಬ.ನಾ.ರವಿ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!