Ad imageAd image

ಫೈನಲ್ ಪ್ರವೇಶಕ್ಕೆ ಕಿವೀಸ್- ಹರಿಣಿಗಳ ಕಾದಾಟ

Bharath Vaibhav
ಫೈನಲ್ ಪ್ರವೇಶಕ್ಕೆ ಕಿವೀಸ್- ಹರಿಣಿಗಳ ಕಾದಾಟ
WhatsApp Group Join Now
Telegram Group Join Now

——————————————————————————–ವಿಶ್ವಕಪ್ ಟ್ವೆಂಟಿ- ಇಂದು ಮೊದಲ ಸೆಮಿಫೈನಲ್

ಕೋಲ್ಕತ್ತಾ: ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ಇಲ್ಲಿನ ಈಡೆನ್ ಗರ‍್ರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆಯಲಿದೆ.
ಪಂದ್ಯ ಸಾಯಂಕಾಲ ೭ ಕ್ಕೆ ಆರಂಭವಾಗಲಿದೆ.  ಎರಡೂ ತಂಡಗಳು ಬಲಾಢ್ಯವಾಗಿವೆ. ದಕ್ಷಿಣ ಆಫ್ರಿಕಾ ಪಂದ್ಯಾವಳಿಯಲ್ಲಿ ಆಡಿದ ರೀತಿಯಿಂದ ಹಾಗೂ ಆಲ್‌ರೌಂಡರ್ ಗಳಿಂದ ತುಂಬಿರುವ ಕಾರಣಕ್ಕೆ ಗೆಲುವಿನ ನೆಚ್ಚಿನ ತಂಡ ಎನಿಸಿದೆ.
ಪಂದ್ಯದ ದಿನ ಯಾವ ತಂಡ ಒತ್ತಡ ನಿಭಾಯಿಸಿ ಉತ್ತಮ ಪ್ರರ‍್ಶನ ತೋರುವುದೋ ಆ ತಂಡಕ್ಕೆ ಗೆಲುವಿನ ನಗೆ ಸಿಗಲಿದೆ. ಆ ಮೂಲಕ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶವನ್ನೂ ಕೂಡ ಮಾಡಲಿದೆ.
ಎರಡನೇ ಸೆಮಿಫೈನಲ್ ಪಂದ್ಯ ಭಾರತ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವೆ ನಾಳೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ತಂಡಗಳು ಇಂತಿವೆ
ದ. ಆಫ್ರಿಕಾ: ಐಡೆನ್ ಮರ‍್ಕಮ್ (ನಾಯಕ) ಕುಂಟೇನ್ ಡೆಕಾಕ್, ರೇನ್ ರಿಕಲ್ಟನ್, ಡೆವಾಡ್ ಬ್ರೇವಿಸ್, ಡೆವಿಡ್ ಮಿಲ್ಲರ್, ಟ್ರಸ್ಟಿನ್ ಸ್ಟಬಸ್, ಮರ‍್ಕೋ ಜಾನ್ಸನ್, ಕರ‍್ಬಿನ್ ಬೌಚ್, ಕಗೀಸೋ ರಬಾಡಾ, ಕೇಶವ್ ಮಹಾರಾಜ್, ಲುಂಗಿನಿ ನಿಗಿಡಿ.
ನ್ಯೂಜಿಲೆಂಡ್: ಟಿಮ್ ಶೇರ‍್ಟ್, ಟಿಮ್ ಅಲೆನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ರಚಿನ್ ರವೀಂದ್ರ ಗ್ಲೇನ್ ಫಿಲಿಪ್ಸ್, ಡರೆಲ್ ಮಿಚೆಲ್, ಮರ‍್ಕ್ ಚಾಪಮನ್, ಕೊಲೆ ಮೆಕ್ನೋಯ್, ಜೇಮ್ಸ್ ನಿಶಾಮ್, ಮ್ಯಾಥ್ಯೂ ಹೆನರಿ, ಜಾಕೋಬ್ ಡಫಿ, ಇಶ್ ಸೋಧಿ, ಲೋಕೆ ರ‍್ಗೂಸನ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!