ಚಿಕ್ಕಬಳ್ಳಾಪುರ : ಕ್ಷುಲ್ಲಕ ಕಾರಣಗಳಿಗಾಗಿ ಇಂದಿನ ಯುವ ಪೀಳಿಗೆ ತುರ್ತು ನಿರ್ಧಾರಗಳನ್ನು ಕೈಗೊಂಡು ಪ್ರಾಣ ಕಳೆದುಕೊಳ್ಳುತ್ತಿರುವುದು (Sucide) ಆತಂಕಕಾರಿ ಸಂಗತಿಯಾಗಿದೆ.
ಇತ್ತೀಚೆಗಷ್ಟೇ ಮೊಬೈಲ್ (Mobile) ನೋಡಬೇಡ ಎಂದಿದ್ದಕ್ಕೆ ಯುವತಿಯೊಬ್ಬಳು (Girl) ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಈಗ ಅತ್ತೆ ಅಡುಗೆ ಕಲಿಯುವಂತೆ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಪೆರೇಸಂದ್ರ ಗ್ರಾಮದ ನಿವಾಸಿ ಶ್ರುತಿ (18) ಆತ್ಮಹತ್ಯೆಗೆ ಶರಣಾದ ಯುವತಿ. ಅತ್ತೆ ಶ್ರುತಿಗೆ ಮನೆಯಲ್ಲಿ ಸುಮ್ಮನೆ ಇರುವ ಬದಲು ಸ್ವಲ್ಪ ಕೆಲಸ ಮಾಡುವುದನ್ನು ಕಲಿ, ನನಗೂ ಸಹಾಯವಾಗುತ್ತದೆ ಮತ್ತು ನಿನಗೂ ಅಡುಗೆ ಕಲಿತಂತಾಗುತ್ತದೆ ಎಂದು ಹೇಳಿದನ್ನು ತಪ್ಪಾಗಿ ಅರ್ಥೈಸಿಕೊಂಡ ಶ್ರುತಿ ತೀವ್ರವಾಗಿ ಮನನೊಂದಿದ್ದಾಳೆ. ಇದೇ ಮನಸ್ತಾಪದಲ್ಲಿ ಮನೆಯಲ್ಲಿದ್ದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೆ ಇಂತಹ ಹಠಾತ್ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.




