Ad imageAd image

ಇಂದು ಮಧ್ಯಾಹ್ನ 12 ಗಂಟೆಗೆ SSLC ಫಲಿತಾಂಶ : ಇಲ್ಲಿದೆ ವೆಬ್ ಸೈಟ್ ಲಿಂಕ್

Bharath Vaibhav
ಇಂದು ಮಧ್ಯಾಹ್ನ 12 ಗಂಟೆಗೆ SSLC ಫಲಿತಾಂಶ : ಇಲ್ಲಿದೆ ವೆಬ್ ಸೈಟ್ ಲಿಂಕ್
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಸುದೀರ್ಘ ಕಾಯುವಿಕೆಗೆ ಇಂದು ತೆರೆ ಬೀಳಲಿದೆ. 2026ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ (ಫಲಿತಾಂಶವು) ಪರೀಕ್ಷೆ-1ರ ಫಲಿತಾಂಶವು ಇಂದು (ಏಪ್ರಿಲ್ 23, ಗುರುವಾರ) ಮಧ್ಯಾಹ್ನ 12:00 ಗಂಟೆಗೆ ಸರಿಯಾಗಿ ಪ್ರಕಟವಾಗಲಿದೆ.

ಫಲಿತಾಂಶ ವೀಕ್ಷಿಸಲು ಇಂದಿನ ಡೈರೆಕ್ಟ್ ಲಿಂಕ್‌ಗಳು:

ಮಧ್ಯಾಹ್ನ 12 ಗಂಟೆಯ ನಂತರ ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ರಿಸಲ್ಟ್ ಲಭ್ಯವಿರುತ್ತದೆ:

karresults.nic.in

kseab.karnataka.gov.in

ರಿಸಲ್ಟ್ ಚೆಕ್ ಮಾಡುವುದು ಹೇಗೆ? (Simple Steps):

karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ

‘SSLC Examination-1 Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕ (DOB) ಎಂಟರ್ ಮಾಡಿ.

‘Submit’ ಒತ್ತಿದ ತಕ್ಷಣ ನಿಮ್ಮ ರಿಸಲ್ಟ್ ಪರದೆಯ ಮೇಲೆ ಮೂಡಲಿದೆ.

ವೆಬ್‌ಸೈಟ್ ಓಪನ್ ಆಗದಿದ್ದರೆ ಚಿಂತೆ ಬೇಡ

ಲಕ್ಷಾಂತರ ವಿದ್ಯಾರ್ಥಿಗಳು ಏಕಕಾಲಕ್ಕೆ ಲಾಗಿನ್ ಆಗುವುದರಿಂದ ವೆಬ್‌ಸೈಟ್ ಸ್ಲೋ ಆಗಬಹುದು. ಅಂತಹ ಸಮಯದಲ್ಲಿ ಈ ಆಯ್ಕೆಗಳನ್ನು ಬಳಸಿ:

SMS ಮೂಲಕ: ನಿಮ್ಮ ಮೊಬೈಲ್‌ನಲ್ಲಿ KAR10 ನಿಮ್ಮ ರೋಲ್ ನಂಬರ್ ಟೈಪ್ ಮಾಡಿ ಅಧಿಕೃತ ಸಂಖ್ಯೆಗೆ ಕಳುಹಿಸಿ.

ಡಿಜಿಲಾಕರ್ (DigiLocker): ಮಧ್ಯಾಹ್ನ 12ರ ನಂತರ ನಿಮ್ಮ ಡಿಜಿಟಲ್ ಅಂಕಪಟ್ಟಿಯನ್ನು digilocker.gov.in ಮೂಲಕ ಪಡೆಯಬಹುದು.

KarnatakaOne App: ಈ ಆಪ್ ಮೂಲಕವೂ ಸುಲಭವಾಗಿ ಫಲಿತಾಂಶ ನೋಡಬಹುದು.

ಫಲಿತಾಂಶದ ಬಗ್ಗೆ ಯಾವುದೇ ಕಾರಣಕ್ಕೂ ಆತಂಕ ಬೇಡ. ಒಂದು ವೇಳೆ ಅಂಕ ಕಡಿಮೆ ಬಂದರೂ ಚಿಂತಿಸಬೇಡಿ, ಪರೀಕ್ಷೆ-2 ಮತ್ತು ಪರೀಕ್ಷೆ-3ರ ಮೂಲಕ ಅಂಕ ಸುಧಾರಿಸಿಕೊಳ್ಳಲು ಅವಕಾಶವಿದೆ” ಎಂದು ಸಚಿವ ಮಧು ಬಂಗಾರಪ್ಪ ಧೈರ್ಯ ತುಂಬಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!