ದಿವ್ಯಾಂಕಾ ಸಿರೋಹಿ ಹರಿಯಾಣ್ವಿ ಚಿತ್ರರಂಗದ ಜನಪ್ರಿಯ ಮುಖ. ಅವರು 50ಕ್ಕೂ ಹೆಚ್ಚು ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 13 ಲಕ್ಷ ಫಾಲೋವರ್ಸ್ ಹೊಂದಿದ್ದರು.
ದಿವ್ಯಾಂಕಾ ಅವರು ಏಪ್ರಿಲ್ 21, 2026 ರಂದು ಗಾಜಿಯಾಬಾದ್‌ನ ರಾಜನಗರ ಎಕ್ಸ್‌ಟೆನ್ಷನ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.
30ನೇ ವಯಸ್ಸಿನಲ್ಲಿ ಅವರ ಈ ಹಠಾತ್ ಸಾವು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ವರದಿಗಳ ಪ್ರಕಾರ, ಬುಧವಾರ ಬೆಳಿಗ್ಗೆ ಗಾಜಿಯಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ದಿವ್ಯಾಂಕಾ ಅವರ ಸಹೋದರ ಹಿಮಾಂಶು ‘ದೈನಿಕ್ ಭಾಸ್ಕರ್’ ಜೊತೆ ಮಾತನಾಡಿ, ‘ತನ್ನ ಸಹೋದರಿಯ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟು ಕೆಳಗೆ ಬಿದ್ದಳು. ಬಿದ್ದ ರಭಸಕ್ಕೆ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಯಿತು’ ಎಂದು ತಿಳಿಸಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಸದ್ಯಕ್ಕೆ, ಸಾವಿನ ಅಧಿಕೃತ ಕಾರಣ ಸ್ಪಷ್ಟವಾಗಿಲ್ಲ. ಕೆಲವು ವರದಿಗಳು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳುತ್ತಿವೆ.




