ಬೆಂಗಳೂರು : ಬೆಂಗಳೂರಿನಲ್ಲಿ 410 ಕೋಟಿ ಮೊತ್ತದ ನಕಲಿ ಜಿಎಸ್‌ಟಿ ರಶೀದಿ ವಂಚನೆಯ ಜಾಲ ಪತ್ತೆಯಾಗಿದ್ದು, ಇದೀಗ ಪೊಲೀಸರು ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣದ ಕಿಂಗ್ ಪಿನ್ ತೌಸೀಕ್ ಅಲಿಯಾಸ್ ಮೊಹಮ್ಮದ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದೀಗ ಆರೋಪಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದು, ಸರಕು ಸರಬರಾಜು ಮಾಡದೆಯೇ ನಕಲಿ ಸೃಷ್ಟಿಸಿ ವಂಚನೆ ಎಸಗಿದ್ದಾನೆ.
ಸರಕಾರಕ್ಕೆ ಬರಬೇಕಿದ್ದ 102.5 ಕೋಟಿ ರೂಪಾಯಿ ತೆರಿಗೆ ಹಣ ಲೂಟಿ ಮಾಡಿದ್ದಾನೆ. ಬೇರೆಯವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಬಳಸಿ ಜಿ ಎಸ್ ಟಿ ನೋಂದಣಿ ಮಾಡಿಕೊಂಡಿದ್ದ.
ಬೇರೆಯವರ ದಾಖಲೆಗಳನ್ನು ಬಳಸಿ ಆರೋಪಿಗಳು ಜಿಎಸ್‌ಟಿ ನೋಂದಣಿ ಪಡೆದಿದ್ದರು. ನೋಟಿಸ್ ನೀಡುತ್ತಿದ್ದಂತೆ ಕಂಪನಿ ರದ್ದು ಮಾಡಿ ಎಸ್ಕೇಪ್ ಆಗಿತ್ತು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದ ಪೊಲೀಸರು ಅರೆಸ್ಟ್ ಮಾಡಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.




