ಗುಳೇದಗುಡ್ಡ: –ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಘೋಷದೊಂದಿಗೆ ಘಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು.
ನಗರದ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದಿಂದ ಮಧ್ಯಾಹ್ನ 3.45 ಗಂಟೆಗೆ ಆರಂಭಗೊಂಡ ಪಥಸಂಚಲನ ನಗರದ ಕೆಳಗಿನ ಮಾರ್ಕೇಟ್, ಹರದೊಳ್ಳಿ, ಸಾಲೇಶ್ವರ ದೇವಸ್ಥಾನ,ಪವಾರ ಕ್ರಾಸ್,ಪುರಸಭೆ, ಕಂಠಿಪೇಟೆ, ಗಚ್ಚಿನಕಟ್ಟಿ,ಚೌಬಜಾರ, ಅರಳಿಕಟ್ಟಿ, ಗುಗ್ಗರಿ ಪೇಟೆಯ ಮೂಲಕ ಹಾಯ್ದು ಭಂಡಾರಿ ಕಾಲೇಜು ಮೈದಾನ ತಲುಪಿತು. ಪಥಸಂಚಲನದಲ್ಲಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಗಣವೇಷದಾರಿ ಸ್ವಯಂಸೇವಕರು, ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದರು.
ದಾರಿಯುದ್ದಕ್ಕೂ ಸೇರಿದ ಮಹಿಳೆಯರು, ಮಕ್ಕಳು ಹರ್ಷೋದ್ವಾರದಿಂದ ಪಥಸಂಚಲನವನ್ನು ಸ್ವಾಗತಿಸಿದರು.ಮುಖ್ಯ ರಸ್ತೆಯಲ್ಲಿ ಶ್ರೀರಾಮ,ಶಿವಾಜಿ, ಗೋವು ಹಾಗೂ ಕರು ಭಾರತಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ನಿರಾಣ ಲಕ್ಷ್ಮೀಬಾಯಿ,ಒನಕೆ ಓಬವ್ವ, ಭಗತ್‍ಸಂಗ್, ಶ್ರೀರಾಮ, ಕಿತ್ತೂರುರಾಣಿ ಚನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರನಾಯಕ್ರ ವೇಷಧಾರಿ ಮಕ್ಕಳು ಪಥ ಸಂಚಲನವನ್ನು ಸ್ವಾಗತಿಸಿದರು.
ಎಲ್ಲೆಲ್ಲೂ ಕೇಸರಿಮಯ ಪಥಸಂಚಲ ಸಾಗುವ ದಾರಿಗುಂಟ ನಗರದ ಕಟ್ಟಡಗಳ ಮೇಲೆ ಭಗವಾಧ್ವಜಗಳು ರಾರಾಜಿಸುತ್ತಿದ್ದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು. ಸ್ವಯಂ ಸೇವಕರ ಮೇಲೆ ಹೂಮಳೆಗರೆದು ಹರ್ಷವ್ಯಕ್ತಪಡಿಸಿದರು.
ಅಲ್ಲಲ್ಲಿ ವೀರಪುಲಕೇಶಿ, ವೀರಸಾರ್ವಕರ,ಭಗತ್ ಸಿಂಗ, ಪ್ರಮೋದ ಮುತಾಲಿಕ, ಸರದಾರ ವಲ್ಲಬಾಯಿ ಪಟೇಲ, ಶಿವಾಜಿ ಮಹಾರಾಣಾ ಪ್ರತಾಪಸಿಂಗ್, ಡಾ ಅಂಬೇಡ್ಕರ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.ಪಥಸಂಚಲನದಲ್ಲಿ ಬಸವರಾಜ ಕುಂಬಾರ, ಬಸವರಾಜ ಒಣರೊಟ್ಟಿ, ಈರಣ್ಣ ಕಂಠಿ, ಈರಣ್ಣ ಬಂಡಿ, ಸಂಪತ್ತಕುಮಾರ ರಾಠಿ, ರವಿ ಶೇಬಿನಕಟ್ಟಿ, ಸಾಗರ ಮಲಜಿ, ವಿಠ್ಠಲ ಪತ್ತಾರ, ಭುವನೇಶ ಪೂಜಾರ, ವಿವೇಕಾನಂದ ದೇವಾಂಗಮಠ, ಸಂಗಣ್ಣ ಹುನಗುಂದ ಸೇರಿದಂತೆ ನೂರಾರು ಸ್ವಯಂಸೇವಕರು ಭಾಗವಹಿಸಿದರು.
ವರದಿ: -ಮಹಾಲಿಂಗೇಶ ಯಂಡಿಗೇರಿ