ಮೊಳಕಾಲ್ಮೂರು :- ತಾಲೂಕಿನಲ್ಲಿ ಅತ್ಯಂತ ಹೆಚ್ಚಾಗಿರುವ ವಾಲ್ಮೀಕಿ ಜನಾಂಗದವರು ಮುಂಬರುವ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಬೇಕು ಎಂದು ವಾಲ್ಮೀಕಿ ಸಂಘದ ಅಧ್ಯಕ್ಷರಾದ ಜಗಳೂರಯ್ಯ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ವಾಲ್ಮೀಕಿ ಭವನದಲ್ಲಿ ಸೋಮವಾರ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಕುಂದು ಕೊರತೆ ವಿಚಾರವಾಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ಭಾಗದಲ್ಲಿ ಅತ್ಯಂತ ಹೆಚ್ಚಿರುವ ವಾಲ್ಮೀಕಿ ಸಮಾಜದ ಬಂಧುಗಳು ವಾಲ್ಮೀಕಿ ದಿನಾಚರಣೆಯನ್ನು ಯಾವುದೇ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಅತ್ಯಂತ ಸದಕರ ದಿಂದ ಆಚರಣೆ ಮಾಡಬೇಕು ಎಂದರು ಅದೇ ರೀತಿ ನಾವು ನಡೆದು ಬಂದ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು ಅದೇ ರೀತಿ ವಾಲ್ಮೀಕಿ ಭವನ ಮುಗಿದಿದೆ ಇನ್ನೂ ಹೊರಗಡೆ ಕೆಲಸವಿದ್ದು ಸುಮಾರು ಎರಡು ಕೋಟಿ ಹಣ ಬೇಕಾಗಬಹುದು ಅದನ್ನು ಹೇಗೆ ವಂದಿಸಬೇಕು ಎಂದು ಸಂಘದಲ್ಲಿ ಚರ್ಚೆ ಆಯಿತು. ಇಂತಹ ವಾಲ್ಮೀಕಿ ಭವನ ನಮ್ಮ ಸಮಾಜಕ್ಕೆ ಸಿಕ್ಕಿರುವುದು ಅದೃಷ್ಟವೇ ಸರಿ ಎಂದರು.
ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ವಿ ಮಾರನಾಯಕ ಮಾತನಾಡಿ ನಮ್ಮ ಸಂಘದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಮಾಜಕ್ಕೆ ಕೈಲಾದಷ್ಟು ಸಹಾಯ ಮಾಡಬೇಕು ನಾಯಕ ಸಮಾಜ ಅದನ್ನು ತೂಗಿಸಿಕೊಂಡು ಹೋಗಬೇಕು ವಾಲ್ಮೀಕಿ ಸಂಘದಲ್ಲೇ ಮತ್ತೊಂದು ಸಂಘ ಹುಟ್ಟಿಕೊಂಡಿದೆ ಅದರ ಬಗ್ಗೆ ನಾವು ಮಾತನಾಡುವುದು ಬೇಡ ಅವರನ್ನು ನಮ್ಮೊಟ್ಟಿಗೆ ತೆಗೆದುಕೊಂಡರು.
ವರದಿ ಪಿಎಂ ಗಂಗಾಧರ್