Ad imageAd image

ಪಟ್ಟದ್ದೇವರ ಹಾಗೂ ಅಗ್ರವಾಲ್ ಅವರ ಸೇವಾ ಕಾರ್ಯ ಮಾದರಿ : ಅನಂತ ಬಿರಾದಾರ

Bharath Vaibhav
ಪಟ್ಟದ್ದೇವರ ಹಾಗೂ ಅಗ್ರವಾಲ್ ಅವರ ಸೇವಾ ಕಾರ್ಯ ಮಾದರಿ : ಅನಂತ ಬಿರಾದಾರ
WhatsApp Group Join Now
Telegram Group Join Now

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಹಾಗು ಪದ್ಮಶ್ರೀ ಜಯಪ್ರಕಾಶ ಅಗ್ರವಾಲ ಅವ ಅಮೃತ ಮಹೋತ್ಸವ | ಆರೋಗ್ಯ ಜನಜಾಗೃತಿ ಅಭಿಯಾನದ ಸಮಾರೋಪ

ಬೀದರ : ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಅನುಭವ ಮಂಟಪದ ಅದ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಹಾಗೂ ಸೂರ್ಯ ಫೌಂಡೇಶನ್ ಸಂಸ್ಥಾಪಕರಾದ ಪದ್ಮಶ್ರೀ ಜಯಪ್ರಕಾಶ ಅಗ್ರವಾಲ್ ಅವರ ಸೇವಾ ಕಾರ್ಯ ಮಾದರಿಯಾಗಿವೆ ಎಂದು ಐ.ಎನ್‌.ಓ ರಾಷ್ಟ್ರೀಯ ಅದ್ಯಕ್ಷರಾದ ಅನಂತ ಬಿರಾದಾರ ಅವರು ಹೇಳಿದರು.

ನಗರದ ಗುರುನಾನಕ್ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೂರ್ಯ ಫೌಂಡೇಶನ್, ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಸೇಶನ್, ಪತಂಜಲಿ ಹಾಗೂ ಗುರುನಾನಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ವತಿಯಿಂದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಹಾಗು ಪದ್ಮಶ್ರೀ ಜಯಪ್ರಕಾಶ ಅಗ್ರವಾಲ ಅವರ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಆರೋಗ್ಯ ಜನಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಕ್ತದಾನ ಶಿಬಿರ ಹಾಗೂ ಸಸಿ ನೆಟ್ಟು ಅವರು ಮಾತನಾಡಿದರು.

ರಕ್ತದಾನ ಬಗ್ಗೆ ಹಾಗೂ ಪರಿಸರ ರಕ್ಷಣೆ ಉಳಿಸುವುದರ ಜೊತೆಗೆ ಜನರ ಆರೋಗ್ಯದ ಬಗ್ಗೆ ಜನರಲ್ಲಿ
ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು. ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.

ರಕ್ತದಾನ ಮಾಡಿ ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು ಅದನ್ನು ಹೋಗಲಾಡಿಸಬೇಕಿದೆ ಹೆಚ್ಚು ಜನರು ಸೇರುವ ಕೇಂದ್ರಗಳಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿದರೆ ದೇಶದಲ್ಲಿನ ರಕ್ತದ ಕೊರತೆ ನೀಗಿಸಬಹುದು ತುರ್ತಾಗಿ ಬೇಕಾಗುವ ರಕ್ತವು ಅಮೂಲ್ಯ ಜೀವ ಉಳಿಸುವ ವಸ್ತುವಾಗಿದೆ ಇದನ್ನರಿತು ಸಮಾಜದ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕೆಂದರು.

ಐ.ಎನ್.ಓ ಹಾಗೂ ಸೂರ್ಯ ಫೌಂಡೇಶನ್ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ ಮಾತನಾಡಿ ಅನುಭವ ಮಂಟಪದ ಅದ್ಯಕ್ಷರು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಸೂರ್ಯ ಫೌಂಡೇಶನ್ ಸಂಸ್ಥಾಪಕರಾದ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ್ ಅವರ ಅಮೃತ ಮಹೋತ್ಸವದ ನಿಮಿತ್ತ ಆರೋಗ್ಯ ಜನಜಾಗೃತಿ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ 75 ಕಡೆ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸೆ ಜಾಗೃತಿ ಶಿಬಿರ, ರಕ್ತದಾನ ಶಿಬಿರ, ಸಸಿ ನೆಡುವ ಹಮ್ಮಿಕೊಂಡು ಪೂಜ್ಯರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಆಯುರ್ವೇದ ಮಂಡಳಿ ಅದ್ಯಕ್ಷರಾದ ಡಾ.ಅಲ್ಲಮಪ್ರಭು ಗುಡ್ಡಾ, ಗುರುನಾನಕ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅದ್ಯಕ್ಷರಾದ ಡಾ.ಸರ್ದಾರ್ ಬಲಬೀರಸಿಂಗ್, ಜಿಎನಡಿ ಇಂಜಿನಿಯರಿಂಗ ಕಾಲೇಜಿನ ಪ್ರಾಚರ್ಯರಾದ ಡಾ.ವೀಣಾ, ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಪೂರ್ಣಿಮಾ ಜಿ, ಐ.ಎನ್.ಓ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ, ರಾಜ್ಯ ಕಾರ್ಯದರ್ಶಿ ಯೋಗೆಂದ್ರ ಯದಲಾಪುರೆ, ರಾಜ್ಯ ಕೋಶಾದ್ಯಕ್ಷ ಡಾ.ಮನ್ಮತಯ್ಯಾ ಸ್ವಾಮಿ, ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಜಿಲ್ಲಾ ಸಂಚಾಲಕಿ ಡಾ.ಮಂಜುಳಾ ಮುಚಳಂಬೆ, ಜಿಲ್ಲಾ ಉಪಾಧ್ಯಕೆ ರೂಪಾ ಪಾಟೀಲ, ಕರ್ನಲ್ ಆರ್.ಡಿ ಸಿಂಗ್, ಶಿವಕುಮಾರ ಸ್ವಾಮಿ, ಮಹೇಶ, ಸಚಿನ, ಸುಧಾಕರ ಸೇರಿದಂತೆ ಇತರರಿದ್ದರು.

ಆಧುನಿಕ ಯುಗದಲ್ಲಿ ಒತ್ತಡದ ಜೀವನಕ್ಕೊಳಗಾಗಿ ಆರೋಗ್ಯದ ಬಗ್ಗೆ ಬಹುತೇಕ ಜನ ಕಾಳಜಿ ವಹಿಸುತ್ತಿಲ್ಲ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸಾ ಪದ್ದತಿ ದೈನಂದಿನವಾಗಿ ಅಳವಡಿಸಿಕೊಂಡರೆ ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನಿರಂತರವಾಗಿ ಜನರಿಗೆ ಯೋಗ ಹಾಗೂ ಪ್ರಾಕೃತಿಕ ಚಿಕಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು.- ಗೋರಖನಾಥ ಕುಂಬಾರ ಯೋಗ ಸಾಧಕ ಹಾಗೂ ಜಿಲ್ಲಾದ್ಯಕ್ಷರು ಐ.ಎನ್.ಓ ಬೀದರ

ವರದಿ: ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!