Ad imageAd image

ಬಸ್ಸುಗಳ ಮೂಲಕ ಸುಮಾರು (200) ಎರಡನೂರು ಜನ ತೀರ್ಥಯಾತ್ರೆಗೆ ಪ್ರಯಾಣ

Bharath Vaibhav
ಬಸ್ಸುಗಳ ಮೂಲಕ ಸುಮಾರು (200) ಎರಡನೂರು ಜನ ತೀರ್ಥಯಾತ್ರೆಗೆ ಪ್ರಯಾಣ
WhatsApp Group Join Now
Telegram Group Join Now

ಅಥಣಿ:-ನಾಗಪುರ ದೀಕ್ಷಾ ಭೂಮಿ ಯಾತ್ರೆಗೆ ನಾಲ್ಕು ಓಲೋ ಬಸ್ಸುಗಳ ಮೂಲಕ ಸುಮಾರು (200) ಎರಡನೂರು ಜನ ತೀರ್ಥಯಾತ್ರೆಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಸ್ ಯಾದವಾಡ ಹೇಳಿದರು.

ಅವರು ಅಥಣಿ ಪಟ್ಟಣದ ನಿರೀಕ್ಷನಾ ಮಂದಿರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯ ಸರ್ಕಾರದಿಂದ ನಾಗಪುರದಲ್ಲಿರುವ ಚೈತ ಭೂಮಿ ತೆರಳಲು ಚೈತ್ರ ಭೂಮಿ ಯಾತ್ರೆಯ ಯೋಜನೆಯಡಿಯಲ್ಲಿ ಸುಮಾರು 200 ಜನ ದೀಕ್ಷಾ ಭೂಮಿಗೆ ತೆರಳುವ ಬಸ್ಸುಗಳಿಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು. ರಈ ಅಥಣಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಾಗಪುರಕ್ಕೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಪುಣ್ಯ ಸ್ಥಳವಾದ ನಾಗಪುರ ದಿಕ್ಷಾ ಭೂಮಿ ಕಾರ್ಯಕ್ರಮಕ್ಕೆ ತಿರುಳಲು ಉಚಿತ ಸಾರಿಗೆ ವ್ಯವಸ್ಥೆ ಮಾಡಿ ಪುಣ್ಯ ಭೂಮಿಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ ಬುದ್ಧನ ಆದರ್ಶ ತತ್ವ ಸಿದ್ಧಾಂತಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಪ್ರೇರಣೆ ಯಾಗಬೇಕು ಎಂದರು ದೀಕ್ಷಾ ಭೂಮಿಗೆ ಪ್ರಯಾಣ ಬೆಳೆಸಿದ ಎಲ್ಲರಿಗೂ ಶುಭಕೋರಿದರು.

ಈ ವೇಳೆ ದಲಿತ ಮುಖಂಡರಾದ ಶಶಿಕಾಂತ್ ಸಾಳ್ವೆ. ಕುಮಾರ್ ಬನಸೋಡೆ ವಿಜಯಕುಮಾರ್ ಆಡಹಳ್ಳಿ. ರಾಜು ವಾಘಮಾರೆ. ಸುಭಾಷ್ ಕಾಂಬಳೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕ್ಷಕರು ಎಸ. ಎ. ಮಾಂಗ ಚಂದ್ರಕಾಂತ್ ಕಾಂಬಳೆ ಜಿ .ಆರ್. ಪವಾರ್ ಓ. ಆಯ್. ಅರಟಾಳ. ರಾಜಶೇಖರ್ ಹಿರೇಮನಿ, ಚಿದಾನಂದ ಬಡ್ಕಂಬಿ. ವರ್ಧಮಾನ ನಾಗನೂರು .ಸುನೀತಾ ಹೊಸಮನಿ ರಾಜೇಶ್ವರಿ. ಚಿಕ್ಕಡೋಳಿ .ಶೃತಿ ಘಟಕಂಬಳೆ ದುಂಡಪ್ಪ ಗೂಳಪ್ಪನವರ ಸೇರಿದಂತೆ ಅನೇಕರು ಇದ್ದರು.

ವರದಿ:- ರಾಜು. ವಾಘಮಾರೆ

WhatsApp Group Join Now
Telegram Group Join Now
Share This Article
error: Content is protected !!