ಮಾನ್ವಿ :-ಪಟ್ಟಣದಾದ್ಯಂತ ಪೊಲೀಸ್ ಸಿಬ್ಬಂದಿಯಿಂದ ಮೆರವಣಿಗೆ,ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಾಚರಣೆ,ಮಾನ್ವಿ ಪಿಐ ವೀರಭದ್ರಯ್ಯ ಹಿರೇಮಠರಿಂದ ವಿನೂತನ ಪ್ರಯೋಗ,ಪೊಲೀಸ್ ಇಲಾಖೆ ಎಂದರೆ ಸಾಕು ಒತ್ತಡದ ಜೀವನ.ಆದರೆ ಮಾನ್ವಿ ಪೊಲೀಸ್ ಇಲಾಖೆ ಸಿಬ್ಬಂದಿ ವಿಜಯದಶಮಿ ಹಬ್ಬದ ನಿಮಿತ್ತ ಆಯುಧಗಳನ್ನು ಪೂಜೆ ಮಾಡಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆ ನಡೆಸಿದರು.
ಮಾನ್ವಿ ಪೊಲೀಸ್ ಸಿಬ್ಬಂದಿ ಖಾಕಿ ತೊಡುವರು, ಆದರೆ ಆಯುಧ ಪೂಜೆಯ ನಿಮಿತ್ತ ಒಂದೇ ಕಲರ್ ಹೊಂದಿದ ಉಡುಪಿನಲ್ಲಿ ಮಿಂಚಿ ಸಿಬ್ಬಂದಿಗಳೆಲ್ಲರು ಬೈಕ್ ಗಳಲ್ಲಿ ಖುಷಿ ಹಂಚಿಕೊಳ್ಳುತ್ತ ಮೆರವಣಿಗೆ ಮಾಡುತ್ತಿರುವುದು ನೋಡಿದರೆ ಒಂದು ರೀತಿಯಲ್ಲಿ ಮೆರಗು ತಂದುಕೊಟ್ಟಂತಾಗಿತ್ತು.
ಮಾನ್ವಿ ಪಿಐ ವೀರಭದ್ರಯ್ಯ ಹಿರೇಮಠ ಅವರ ವಿನೂತನ ಪ್ರಯೋಗದಿಂದ ಸಿಬ್ಬಂದಿಗಳೆಲ್ಲರು ಉಡುಗೆತೊಟ್ಟು ಮಿಂಚಲು ಕಾರಣ ಎಂದು ಸಾರ್ವಜನಿಕರು ಹಾಗು ಪೊಲೀಸ್ ಇಲಾಖೆ ಸಿಬ್ಬಂದಿ ತಿಳಿಸಿದರು.
ವರದಿ :- ಶಿವತೇಜ್