ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ್ ರಾಠೋಡ, ಅವರ ನೇತೃತ್ವದಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯಂದು ಗಾಂಧಿ ಭಾರತ ಎಂಬ ಹೆಸರಿನಲ್ಲಿ ಗಾಂಧಿ ನಡಿಗೆ (ಪಾದಯಾತ್ರೆ) ಕಾರ್ಯಕ್ರಮವನ್ನು, ಚಿಂಚೋಳಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಚಂದಾಪುರದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ವೃತ್ತ ವರೆಗೆ ಪಾದಯಾತ್ರೆ ಮಾಡಿದರು .
ಕಾರ್ಯಕ್ರಮ ಉದ್ದೇಶಿಸಿ ಸುಭಾಷ್ ರಾಠೋಡ, ಅವರು ಮಾತನಾಡಿ ಪ್ರಪಂಚಕ್ಕೆ ಸತ್ಯ ಅಹಿಂಸೆ ತ್ಯಾಗ ಮಂತ್ರ ಹೇಳಿಕೊಟ್ಟ ಮತ್ತು ಕಾರ್ಯರೂಪಕ್ಕೆ ತಂದು ಇಡಿ ಜಗತ್ತಿನ ಮನುಕುಲಕ್ಕೆ ಶಾಂತಿ ಸಂದೇಶ ಸಾರಿದ ಶಾಂತಿಧೂತರು ಮೋಹನ ದಾಸ್ ಕರಮ್ ಚಾಂದ್ ಗಾಂಧಿ ಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೇತೃತ್ವವಹಿಸಿ, ಅಧ್ಯಕ್ಷರಾಗಿ ನಡೆಸಿಕೊಟ್ಟ ಕಾಂಗ್ರೆಸ್ ಪಕ್ಷದ 29 ನೇ ಬೆಳಗಾವಿ ಅಧಿವೇಶನಕ್ಕೆ ಈಗ 100 ವರ್ಷ ಪೂರೈಸಿದ ಸಂಭ್ರಮ ಹಿನ್ನಲೆಯಲ್ಲಿ, ಇತಿಹಾಸದಲ್ಲಿ ದಾಖಲಾಗಿರುವ ಈ ಚಾರಿತ್ರಿಕ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷರಾದ ಆನಂದ್ ಟೈಗರ್, ಪುರಸಭೆ ಉಪಾಧ್ಯಕ್ಷರಾದ ಸುಲ್ತಾನ ಬೇಗಮ್ ಸ್ಯೆಯದ್ ಖಲಿಲ್ ಪಟೇಲ್, ಕಾಂಗ್ರೆಸ್ ಪಕ್ಷದ ತಾಲೂಕ್ ಅಧ್ಯಕ್ಷರಾದ ಬಸವರಾಜ ಆರ್. ಮಲಿ, ಕಾಳಗಿ ತಾಲೂಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ದೇವೀಂದ್ರಪ್ಪ ಹೆಬ್ಬಾಳ, ಗೋಕಲೆ ಸಂತೋಷ್ ಗುತ್ತೇದಾರ್ ಲಕ್ಷ್ಮಣ ಆವುಂಟಿ ರೇವಣಸಿದ್ದ ಕಟ್ಟಿಮನಿ ಮಲ್ಲಿನಾಥ್ ಹೂವಿನ ಬಾವಿ ಗೋಪಾಲ್ ಕೂರಡಂಪಳ್ಳಿ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ :-ಸುನೀಲ ಸಲಗರ