ಬೆಳಗಾವಿ : ಜಿಲ್ಲೆಯ 2023 ಅಕ್ಟೋಬರ್ 10 ರಂದು ನಡೆದ ಬಾಲ್ಯ ವಿವಾಹ ಪ್ರಕರಣ ರಾಜ್ಯವ್ಯಾಪಿ ಸುದ್ದಿಯಾಗುತ್ತಿದ್ದು, ಇದೀಗ ಈ ಬಗ್ಗೆ ಮಾನವ ಹಕ್ಕು ಜಾರಿ ನಿರ್ದೇಶನಾಲಯ ನಿರ್ದೇಶಕ ಎಸ್ ಪಿ ರವೀಂದ್ರ ಗಡಾದಿ ಪ್ರತಿಕ್ರಿಯಿಸಿದ್ದು, ನನಗೂ ಇದಕ್ಕೂ ಯಾವ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸಂಬಂಧಿಯೊಬ್ಬರು ಮೃತಪಟ್ಟಿದ್ದರಿಂದ ಅವರನ್ನು ನೋಡಲೆಂದು ಊರಿಗೆ ಹೋದಾಗ ಮದುವೆಗೆ ಹೋಗಿದ್ದೆ ಅಷ್ಟೇ.. ಈ ಮದುವೆಗೂ ನನಗೂ ಸಂಬಂಧವಿಲ್ಲ ತಪ್ಪು ಮಾಡಿದವರ ವಿರುದ್ಧ ಕ್ರಮವಾಗಲಿ, ಇದಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವೆ ಎಂದರು.
ಸಂಬಂಧಿಯನ್ನೂ ನೋಡಲೆಂದು ಊರಿಗೆ ಹೋದಾಗ ಮದುವೆಗೆ ಹೋಗಿದ್ದೆ, ಅದರೆ ಮದುವೆಯಲ್ಲಿ ಮಧುವಿನ ವಯಸ್ಸು ಕೇಳಲು ಸಾಧ್ಯವಿಲ್ಲ, ಬಾಲಕಿಯ ತಾಯಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ನಿಜಕ್ಕೂ ಸುಳ್ಳು, ಈ ಪ್ರಕರಣದಲ್ಲಿ ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರವೀಂದ್ರ ಗಡಾದಿ ತಿಳಿಸಿದರು.
ಬಾಲ್ಯ ವಿವಾಹವನ್ನು ರವೀಂದ್ರ ಗಡಾಗಿ ಅವರೇ ಮುಂದೆ ನಿಂತು ಮಾಡಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಆದರೆ ಇದಕ್ಕೆ ನನಗೂ ಯಾವುದೇ ಸಂಬಂಧವಿಲ್ಲ, ಮದುವೆಯಾದ ಬಾಲಕಿಯ ಆಧಾರ್ ಕಾರ್ಡ್ ನಲ್ಲಿ ಹುಟ್ಟಿದ ದಿನಾಂಕವನ್ನು ಬದಲಾಯಿಸಲಾಗಿದೆ ಈ ಬಗ್ಗೆ ಕೂಡ ತನಿಖೆಯಾಗಬೇಕು ಎಂದು ರವೀಂದ್ರ ಗಡಾದಿ ಆಗ್ರಹಿಸಿದರು.