Ad imageAd image

ನೌಕರರು ತಮ್ಮ ಆರೋಗ್ಯದ ಕಡೆ ಗಮನಹರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಸಂಕನೂರ

Bharath Vaibhav
ನೌಕರರು ತಮ್ಮ ಆರೋಗ್ಯದ ಕಡೆ ಗಮನಹರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಸಂಕನೂರ
WhatsApp Group Join Now
Telegram Group Join Now

ಕಲಘಟಗಿ: -ನೌಕರರು ತಮ್ಮ ಆರೋಗ್ಯದ ಕಡೆ ಗಮನಹರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್. ವಿ ಸಂಕನೂರ ಹೇಳಿದರು.ಪಟ್ಟಣದಲ್ಲಿ ನಿರ್ಮಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕ ಶಾಖೆಯ ನೂತನ ಕಟ್ಟಡದ ಸಂಕೀರ್ಣ ಶನಿವಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಈಗಾಗಲೇ 7 ನೇ ವೇತನ ಆಯೋಗ ಜಾರಿಗೆ ತಂದಿದ್ದು ಸಂತಸದ ವಿಷಯವಾಗಿದೆ ನೌಕರರ ಮುಂದಿನ ಬೇಡಿಕೆ ಎನ್ ಪಿಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೆ ತರುವದಾಗಿದೆ ನಾವು ಕೂಡಾ ಬರುವ ದಿನಗಳಲ್ಲಿ ಸದನದಲ್ಲಿ ಒಪಿಎಸ್ ಜಾರಿಗೆ ತರಲು ಸರ್ಕಾರದ ಗಮನ ಸೆಳೆದು ನಿಮ್ಮ ಜೊತೆ ಕೈಜೋಡಿಸುತ್ತೇನೆ ಎಂದರು.ನನ್ನ ಅನುದಾನದಲ್ಲಿ ನೌಕರರ ಸಂಘದ ಕಟ್ಟಡಕ್ಕೆ ಈಗಾಗಲೇ 8 ಲಕ್ಷ ಅನುದಾನ ನೀಡಿದ್ದು ಬರುವ ದಿನಗಳಲ್ಲಿ ಸಾಧ್ಯವಾದರೆ ಮತ್ತೆ ನೀಡುವದಾಗಿ ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಮಾತನಾಡಿ ದೇಶದ ಒಂದು ಭಾಗ ಸರ್ಕಾರಿ ನೌಕರರ ವರ್ಗದ ಮೇಲೆ ನಿಂತಿದೆ ನೀವುಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರೆ ಸರ್ಕಾರಕ್ಕೆ ಯಾವುದು ದೊಡ್ಡದಲ್ಲ ಜನರು ನಿಮ್ಮ ಕಡೆ ದಿನನಿತ್ಯ ರೈತರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಹಲವು ಕೆಲಸ ಕಾರ್ಯಕ್ಕಾಗಿ ಬಂದಾಗ ಅವರ ಸಮಸ್ಯೆಗೆ ಸ್ಪಂದಿಸಲು ಮನವಿ ಮಾಡಿದರು.

ಸಚಿವ ಸಂತೋಷ್ ಲಾಡ್ ಅವರು ಕೂಡಾ ಕಟ್ಟಡಕ್ಕೆ 25 ಲಕ್ಷ ಅನುದಾನ ನೀಡಿದ್ದಾರೆ ಹಲವು ಸಹಾಯ ಸಹಕಾರದಿಂದ ಉತ್ತಮ ಕಟ್ಟಡ ನಿರ್ಮಿಸಿದ್ದೀರಿ ನೌಕರ ವರ್ಗದವರ ಕೆಲಸದ ಒತ್ತಡದ ನಡುವೆ ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದು ಉತ್ತಮ ಕಾರ್ಯವಾಗಿದೆ ಎಂದರು.ನೌಕರ ಸಂಘದ ತಾಲ್ಲೂಕ ಅಧ್ಯಕ್ಷ ಆರ್. ಎಂ ಹೊಲ್ತಿಕೋಟಿ ಮಾತನಾಡಿ ಹಲವು ಇಲಾಖೆಗಳಲ್ಲಿ ನೌಕರರ ಸಂಖ್ಯೆ ಕಡಿಮೆ ಇರುವದರಿಂದ ಕೆಲವರು ಒತ್ತಡದ ನಡುವೆ ಕೆಲಸ ನಿರ್ವಹಿಸುವಂತಾಗಿದೆ ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್. ಎಫ್ ಸಿದ್ದನಗೌಡ್ರ, ಸಚಿವ ಸಂತೋಷ್ ಲಾಡ್ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ,ತಹಸೀಲ್ದಾರ ವಿರೇಶ ಮುಳಗುಂದಮಠ, ಬಿಇಓ ಉಮಾದೇವಿ ಬಸಾಪುರ, ಬಸವರಾಜ ಅಂಗಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ. ಜೆ ಯೋಗಪ್ಪನವರ, ಶಿಕ್ಷಕರಾದ ಐ. ವಿ ಜವಳಿ, ಆರ್. ಎಸ್ ಜಂಬಗಿ, ರಾಜು ಲಮಾಣಿ ಇನ್ನಿತರರು ಇದ್ದರು.

ವರದಿ : ಶಶಿಕುಮಾರ ಕಲಘಟಗಿ

WhatsApp Group Join Now
Telegram Group Join Now
Share This Article
error: Content is protected !!