ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಸೇಡಂ ವಿಧಾನಸಭೆ ಕ್ಷೇತ್ರದ ವಾಣಿಜ್ಯ ಗ್ರಾಮ ಎಂದೆ ಹೆಸರುವಾಸಿಯಾಗಿರುವ ಸುಲೇಪೇಟನಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಗ್ರಾಮದ ಸುತ್ತಮುತ್ತಲಿನ ಜನರು ವಿಜಯದಶಮಿ ಹಬ್ಬದ ಐದು ದಿನದ ಘಟ್ಟಿ ಹಾಕುವ ಜನರು ಅಂಗಡಿ ಮುಂಗಟ್ಟು ಹಾಗೂ ಹೂವು ಹಣ್ಣು ಇಳದಎಲೆ ಭರ್ಜರಿಯಾಗಿ ವ್ಯಾಪಾರ ನಡೆಯಿತು ಇದೇ ರೀತಿ ಕಬ್ಬು ಬಾಳಿ ಶ್ರೀಗಂಧ ಮಾವಿನ ತೋರಣ ಮಣ್ಣಿನ ಹಣತೆ ಮಣ್ಣಿನ ಕುಳ್ಳಿ ತೆಗೆದುಕೊಳ್ಳುವವರು ಗಾಡಿ ಬಂಡೆ ಹತ್ತಿರ ಬಂದು ತೆಗೆದುಕೊಳ್ಳುತ್ತಿದ್ದರು .
ಅದೇ ರೀತಿ ಪ್ರತಿಯೊಂದು ಕಿರಾಣಿ ಅಂಗಡಿಗಳಲ್ಲಿ ಹಬ್ಬಕ್ಕೆ ಬೇಕಾಗುವಂತ ದಿನಸಿ ವ್ಯಾಪಾರಗಳನ್ನು ಮಾಡುತ್ತಿದ್ದರು ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಮಕ್ಕಳು ಹಾಗೂ ಪುರುಷರು ಸೇರಿ ವ್ಯಾಪಾರ ಮಾಡುತ್ತಿದ್ದರು ಈ ಹಬ್ಬ ಹಿಂದೂ ಧರ್ಮದ ದೊಡ್ಡ ಹಬ್ಬ ಆಗಿರುವುದರಿಂದ ಎಲ್ಲಾ ಜಾತಿ ಜನಾಂಗದವರು ಸೇರಿ ಹಬ್ಬ ಆಚರಣೆ ಮಾಡುವಂತ ಪರಿಪಾಠ ನಾವು ನೋಡುತ್ತೇವೆ.
ವರದಿ :-ಸುನೀಲ್ ಸಲಗರ