Ad imageAd image

ಬ್ರಾಂಡೆಡ್ ವಾಚ್ ಗಳ ಹೆಸರನಲ್ಲಿ ವಂಚನೆ : 670 ನಕಲಿ ವಾಚ್‌ಗಳು ವಶಕ್ಕೆ 

Bharath Vaibhav
ಬ್ರಾಂಡೆಡ್ ವಾಚ್ ಗಳ ಹೆಸರನಲ್ಲಿ ವಂಚನೆ : 670 ನಕಲಿ ವಾಚ್‌ಗಳು ವಶಕ್ಕೆ 
WhatsApp Group Join Now
Telegram Group Join Now

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಾಂಡೆಡ್ ವಾಚ್ ಖರೀದಿಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ನಕಲಿ ವಾಚ್ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕಡಿಮೆ ಬೆಲೆಯ ಆಮಿಷವಿಟ್ಟು ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಐವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಹರೀಶ್ ಕುಮಾರ್, ಸೈಯದ್ ಜೈಸದ್ ಇಕ್ಬಾಲ್, ಮೊಹಮ್ಮದ್ ಹಬೀಬ್ ಹುಸೈನ್, ಖಲೀಮ್ ಉಲ್ಲಾ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು “ಆಫ್ ರೇಟ್”, “ಚೀಪ್ ರೇಟ್” ಎಂಬ ಆಮಿಷ ನೀಡಿ, ₹5,000 ಮೌಲ್ಯದ ವಾಚ್‌ಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ಹೇಳಿ ನಕಲಿ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದರು.

Titan Company ಹೆಸರಿನಲ್ಲಿ ನಕಲಿ ವಾಚ್‌ಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಕಂಪನಿಯೇ ಈ ಕುರಿತು ದೂರು ನೀಡಿದ ಹಿನ್ನೆಲೆ, ಸಿಸಿಬಿ ಆರ್ಥಿಕ ಅಪರಾಧ ನಿಗ್ರಹ ದಳ ಕಾರ್ಯಾಚರಣೆ ನಡೆಸಿ ಪ್ರಕರಣ ಬಯಲಿಗೆ ತಂದಿದೆ.

ಕಾರ್ಯಾಚರಣೆಯಲ್ಲಿ ಸುಮಾರು ₹25 ಲಕ್ಷ ಮೌಲ್ಯದ 670 ನಕಲಿ ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು RT Nagar ಮತ್ತು Chickpet ಪ್ರದೇಶಗಳ ಅಂಗಡಿಗಳಲ್ಲಿ ಈ ವಾಚ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸದ್ಯ ಆರೋಪಿಗಳು ಈ ನಕಲಿ ವಾಚ್‌ಗಳನ್ನು ಎಲ್ಲಿ ತಯಾರಿಸುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬ್ರಾಂಡೆಡ್ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!