ಸೇಡಂ:– ತಾಲೂಕಿನ ಗಡಿ ಭಾಗ ಗ್ರಾಮಗಳಾದ ಸಿಲಾರಕೋಟ್ ಮತ್ತು ಮೆದಕ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕ ಮತ್ತು ಸೇಡಂ ತಾಲೂಕ ಘಟಕ ವತಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಜೊತೆಗೆ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಕೊರಳ್ಳಿ ಅವರ ಜನ್ಮ ದಿನದ ನಿಮತ್ಯ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್, ಅಂಕಲಿಪಿ ನೀಡಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ, ಉಮೇಶ್ ದೇವರಹಳ್ಳಿ, ಶೇಖರ್ ನಾಯಿಕೊಡಿ, ಭಿಮಶಪ್ಪ ಪಾಖಲ, ಶ್ರೀನಿವಾಸ್ ಮೆದಕ್, ಸೀನು ಪಾಖಲ, ಸಿಲಾರಕೊಟ್ ಶಾಲೆಯ ಮುಖ್ಯ ಗುರುಗಳು, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.