ಕಲಘಟಗಿ : –ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಗಮಿಸಿದ ಕನ್ನಡಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಪಟ್ಟಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಹನ್ನೆರಡು ಮಠದಿಂದ ವಿವಿಧ ಕಲಾತಂಡ ಹಾಗೂ ವಾದ್ಯಮೇಳಗಳಿಂದ ರಥಯಾತ್ರೆಯನ್ನು ಪಟ್ಟಣದಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷರಾ ಡಾ.ಲಿಂಗರಾಜ ಅಂಗಡಿ, ತಹಶೀಲ್ದಾರ ವಿರೇಶ ಮುಳಗುಂದಮಠ, ಸಿಪಿಐ ಶ್ರೀಶೈಲ ಕೌಜಲಗಿ, ಪಿಎಸ್ಐ ಬಸವರಾಜ ಯದ್ದಲಗುಡ್ಡ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಹರೀಶ ಮಠದ, ಸೋಮು ಬೆನ್ನೂರ, ಐ. ಸಿ. ಗೋಕುಲ, ಗಂಗಪ್ಪ ಗೌಳಿ, ಎಸ್. ಎಸ್. ತಡಸಮಠ, ಕೃಷ್ಣಾ ತಹಶೀಲ್ದಾರ, ಪ್ರಮೋದ ಪಾಲ್ಕರ, ಈಶ್ವರ ಜವಳಿ, ವೈ ಜಿ ಭಗವತಿ, ಶ್ರೀಧರ ಪಾಟೀಲ ಕುಲಕರ್ಣಿ, ಸೋಮಲಿಂಗ ಒಡೆಯರ, ಶಂಕರಗೌಡ ಭಾವಿಕಟ್ಟಿ, ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ತಾಲೂಕು ಕಸಾಪ ಸದಸ್ಯರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ವಿವಿಧ ಶಾಲೆಗಳ ಸಿಬ್ಬಂದಿ ವರ್ಗ ಮತ್ತು ಮಕ್ಕಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ವರದಿ:-ನಿತೀಶ ತಡಸ