Ad imageAd image

’ಗೃಹಲಕ್ಷ್ಮೀ’ ದಸರಾ ಸಂಭ್ರಮ, ಮಗನಿಗೆ ಬೈಕ್ ಕೊಡಿಸಿದ ತಾಯಿ

Bharath Vaibhav
’ಗೃಹಲಕ್ಷ್ಮೀ’ ದಸರಾ ಸಂಭ್ರಮ, ಮಗನಿಗೆ ಬೈಕ್ ಕೊಡಿಸಿದ ತಾಯಿ
WhatsApp Group Join Now
Telegram Group Join Now

ಬೆಳಗಾವಿ: -ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ‘ಗೃಹಲಕ್ಷ್ಮೀ’ ಯೋಜನೆಯ ಹಣವನ್ನು ಕೂಡಿಟ್ಟು, ಬೆಳಗಾವಿ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ಬೈಕ್ ಕೊಡಿಸುವ ಮೂಲಕ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.ಗೋಕಾಕ್ ತಾಲ್ಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ, ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸಿದ್ದಾರೆ. ಶುಕ್ರವಾರ ಆಯುಧ ಪೂಜೆ ದಿನದಂದು ಶೋ ರೂಮಿನಿಂದ ಬೈಕ್ ಖರೀದಿಸಿ, ಪೂಜೆ ಮಾಡಿ ಸಂಭ್ರಮಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ಹಣ ಇಂದು ರಾಜ್ಯದ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ನಾನಾ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಅದರಂತೆ ಕೌಜಲಗಿಯ ಬಾಗವ್ವಾ ನೀಲಪ್ಪ ಸಣ್ಣಕ್ಕಿಅವರು ತನ್ನ ಮಗನಿಗೆ ಬೈಕ್ ಕೊಡಿಸುವ ದುಡಿಮೆಗೆ ಹೋಗಲು ನೆರವಾಗಿದ್ದಾರೆ.ಗೃಹಲಕ್ಷ್ಮೀ ಹಣದಿಂದ ಬೈಕ್ ಕೊಡಿಸಿದ ತಮ್ಮ ತವರು ಜಿಲ್ಲೆ ಕೌಜಲಗಿಯ ತಾಯಿ -ಮಗನಿಗೆ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಭ ಹಾರೈಸಿದ್ದಾರೆ.

ಕುಟುಂಬದ ಮನೆಯೊಡತಿಯರಿಗೆ ಪ್ರತಿ ತಿಂಗಳ ‘ಗೃಹಲಕ್ಷಿ’ ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದೆ. ಗೃಹಲಕ್ಷ್ಮೀ ಹಣವು ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವುದು ಸಚಿವರಲ್ಲಿ ಹರ್ಷ ತರಿಸಿದೆ.

ವರದಿ :ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!