ಹುಕ್ಕೇರಿ :-ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಾಡಿಗೆ ಬೆಳಕು ಚೆಲ್ಲುವ ಮಹಾಸ್ವಾಮಿಗಳಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷ ಬಿ ವೈ ವಿಜಯಂದ್ರ ಹೇಳಿದರು.
ಅವರು ಇಂದು ಹುಕ್ಕೇರಿ ಹಿರೇಮಠದ ದಸರಾ ಉತ್ಸವದ ಚಂಡಿಕಾ ಹೋಮದಲ್ಲಿ ಭಾಗವಹಿಸಿ ಶ್ರೀ ಗುರುಶಾಂತೇಶ್ವರರಿಗೆ ,ಅನ್ನಪೂರ್ಣೆಶ್ವರಿಗೆ ,ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಧಾನಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ನಾನು ಚಂದ್ರಶೇಖರ ಮಹಾಸ್ವಾಮಿ ಗಳಿಗೆ ಭೇಟಿ ನೀಡಿ ಅವರ ಆಶಿರ್ವಾದ ಪಡೆದಿದ್ದೆನೆ .ಕಳೆದ ವರ್ಷ ನಾನು ಈ ದಸರಾ ಉತ್ಸವದಲ್ಲಿ ಪಾಲ್ಗೊಂಡಾಗ ಶ್ರೀಗಳು ಆಶಿರ್ವಾದ ಪ್ರಕಾರ ಇಂದು ನಾನು ಬಿ ಜೇ ಪಿ ರಾಜ್ಯಾದ್ಯಕ್ಷನಾಗಿ ಮಠಕ್ಕೆ ಭೇಟಿ ನೀಡಿದ್ದೆನೆ ಎಂದರು .ನಂತರ ನಡೆದ ಸಮಾರಂಭದಲ್ಲಿ ಬಿ ವೈ ವಿಜಯೇಂದ್ರ ರವರಿಗೆ ಶ್ರೀಗಳು ಆಶಿರ್ವದಿಸಿದರು.
ಶಾಸಕ ನಿಖಿಲ ಕತ್ತಿ ಮಾತನಾಡಿ ವಿಜಯೇಂದ್ರ ರವರು ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷ ಸ್ಥಾನ ಪಡೆಯುವದಕ್ಕಿಂತ ಮೊದಲು ಈ ಮಠಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದು ಕೇಲವೆ ದಿನಗಳಲ್ಲಿ ಅದ್ಯಕ್ಷ ಸ್ಥಾನ ಪಡೆದರು ಈಗ ಮತ್ತೆ ಮಠಕ್ಕೆ ಬಂದು ಶ್ರೀಗಳ ಆಶಿರ್ವಾದ ಪಡೆದಿದ್ದಾರೆ ಮುಂಬರುವ ವರ್ಷಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ಹೊಂದಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಹುಣಶ್ಯಾಳದ ನಿಜಗುಣ ಮಹಾಸ್ವಾಮಿಗಳು ,ಹುಕ್ಕೇರಿ ಶಾಸಕ ನಿಖೀಲ ಕತ್ತಿ, ರಾಯಭಾಗ ಶಾಸಕ ದುರ್ಯೋಧನ ಐಹೋಳೆ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ, ಚೇತನ ಅಂಗಡಿ, ರಾಚಯ್ಯ ಹಿರೇಮಠ, ರಾಜೇಶ ನೆರ್ಲಿ ಮೊದಲಾದವರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ