ತುಮಕೂರು:- ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಹಿಂಬಾಗದಲ್ಲಿರೋ ಅಮಾನಿಕೆರೆ ದುಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ..! ಹೌದು ತುಮಕೂರು ನಗರ ಪ್ರಾಧಿಕಾರದ ವ್ಯಾಪ್ತಿಯ ನಿರ್ವಹಣೆಗೆ ಒಳಪಡುವ ಈ ಅಮಾನಿಕೆರೆ ಪರಿಸ್ಥಿತಿ ನೋಡಿದ್ರೆ ತುಂಬಾ ಅವಮಾನದ ಸಂಗತಿಯಾಗಿದೆ.
ಒಂದು ಕಡೆ ಸುತ್ತ ಮುತ್ತ ಇರುವ ಕೈಗಾರಿಕೆಗಳಿಂದ ಬರುವ ನೀರು ಮತ್ತು ತ್ಯಾಜ್ಯಗಳಿಂದ ನೀರು ವಿಷವಾಗಿ ನೀರಿನಲ್ಲಿ ವಾಸ ಮಾಡುವ ಮೀನುಗಳು ಸಾಯುತ್ತಿವೆಯಂತೆ. ಇನ್ನೊಂದು ಕಡೆ ಈ ಕೆರೆಯು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ದಿನನಿತ್ಯ ಈ ಕೆರೆಯ ಪಾರ್ಕ್ ಬರುವವರಿಂದ 10 ರಿಂದ 20 ರೂಪಾಯಿಗಳನ್ನು ಪ್ರತಿಯೊಬ್ಬರಿಂದ ಕಟ್ಟಿಸಿಕೊಳ್ಳುತ್ತಾರಂತೆ. ಆದ್ರೇ ಈ ಪಾರ್ಕ್ ನಲ್ಲಿ ಸೂಕ್ತ ನಿರ್ವಹಣೆ ಇಲ್ಲದೇ ಗಿಡ ಗಂಟಿಗಳು ಬೆಳೆದು ಪೊದೆಗಳಾಗಿದ್ದು,ಸ್ವಚ್ಛತೆಯೇ ಮರೀಚಿಕೆ ಯಾಗಿದೆ ಎನ್ನುತ್ತಾರೆ ಇಲ್ಲಿಗೆ ಬರುವ ಪಾರ್ಕ್ ಪ್ರಿಯರು.
ಇನ್ನೂ ಕೆರೆಯಲ್ಲೂ ಸಹ ಪ್ಲಾಸ್ಟಿಕ್ ಸೇರಿದಂತೆ ಕಸ ಕಡ್ಡಿಗಳ ತ್ಯಾಜ್ಯಗಳಿದ್ದರೂ ಸಹ ಇವನ್ನು ಸ್ವಚ್ಚ ಗೊಳಿಸಲು ಇಲ್ಲಿನ ಪ್ರಾಧಿಕಾರ ಕ್ರಮ ಕೈಗೊಂಡಿಲ್ಲವಂತೆ…! ಇನ್ನೂ ಕೆರೆಯ ನೀರು ಕಲುಷಿತವಾಗಿ ಮೀನುಗಳು ಸತ್ತು ನೀರಿನಲ್ಲೇ ತೇಲುತ್ತಿದ್ದು. ಕೆರೆ ಬದಿಯಲ್ಲೇ ವಾಕ್ ಗಬ್ಬೆದ್ದು ವಾಸನೆ ಬಡಿಯುತ್ತದೆಯಂತೆ..! ಇಷ್ಟಾದರೂ ಸಹ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ತುಮಕೂರು ಜಿಲ್ಲಾಧಿಕಾರಿಗಳು ಆದ ಶುಭಂ ಕಲ್ಯಾಣಿ ಅವರು ಹಾಗೂ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಈ ಕಡೆ ಸುಳಿದೆ ಇಲ್ಲವಂತೆ..!
ಇದರಿಂದ ಬಾರಿ ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು ದಿನನಿತ್ಯ ಬರುವ ಪಾರ್ಕ್ ಪ್ರಿಯರಿಗೆ ಮಾತ್ರ ತುಂಬಾ ತೊಂದರೆ ಯಾಗುತ್ತದೆ. ಆದ್ದರಿಂದ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ತುಮಕೂರು ಡಿ.ಸಿ ಹಾಗೂ ಜಿಲ್ಲಾ ಮೀನುಗಾರಿಕೆ ಇಲಾಖೆ ನಿರ್ದೇಶಕರ ಗಮನಕ್ಕೆ ತೆಗೆದುಕೊಂಡು ಬಂದು ಅಭಿಪ್ರಾಯ ಪಡೆದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಅಮಾನಿಕೆರೆ ಹಾಗೂ ಪಾರ್ಕ್ ಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:- ಬಸವರಾಜು.