ಬಾಗಲಕೋಟೆ : ಹುನಗುಂದ ತಾಲ್ಲೂಕಿನ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2025-26ನೇ ಕಾರ್ಮಿಕರ ಕ್ರಿಯಾಯೋಜನೆ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಹಾಗೂ ಮನೆಗೊಂದು ಬಚ್ಚಲು ಗುಂಡಿ ಅಭಿಯಾನಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಡಪ್ಪ ಕುರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗಣ್ಣ ಕಳ್ಳೋಳ್ಳಿ ಚಾಲನೆ ನೀಡಿದರು.
ಬಳಿಕ ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಯೋಜನೆ ಬಗ್ಗೆ ಕರಪತ್ರಗಳು ಮೂಲಕ ಮಾಹಿತಿ ನೀಡಿ ವೈಯಕ್ತಿಕ ಕಾಮಗಾರಿಗಳ ಜನರಿಂದ ಬೇಡಿಕೆ ಪಡೆಯಲಾಯಿತು. ಒಂದು ತಿಂಗಳ ಕಾಲ ನಡೆಯಲಿದ್ದು, ರೈತರು ತಮ್ಮಗೆ ಬೇಕಾದ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ , ಗ್ರಾಪಂ ಕಾರ್ಯದರ್ಶಿ ಶಂಕರನಾಂದ ಹುಣಶ್ಯಾಳ, ಡಾಟಾ ಎಂಟ್ರಿ ಆಪರೇಟರ್ ಸಚಿನ್ ಕೊಳ್ಳಿ, ಬಿಎಫ್ ಟಿ ಸಂತೋಷ್ ಅಕ್ಕಿ, ಅಕೌಂಟೆಂಟ್ ಯಲ್ಲಪ್ಪ ಕೋರಿ, ಗ್ರಾಪಂ ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.