Ad imageAd image
- Advertisement -  - Advertisement -  - Advertisement - 

ಡಿಸಿಎಂ ವಿರುದ್ಧ ಜೆಡಿಎಸ್ ಪ್ರತಿಭಟನೆ

Bharath Vaibhav
ಡಿಸಿಎಂ ವಿರುದ್ಧ ಜೆಡಿಎಸ್ ಪ್ರತಿಭಟನೆ
WhatsApp Group Join Now
Telegram Group Join Now

ಹುಬ್ಬಳ್ಳಿ: -ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ಬುಧವಾರ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

ಹು-ಧಾ ಮಹಾನಗರ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಗುರುರಾಜ ಹುಣಸಿಮರದ ಮತ್ತು ಬಿ.ಬಿ. ಗಂಗಾಧರಮಠ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಕ್ಕೆ ಸಿಡಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದು ಪ್ರತಿಭಟನಾಕಾರರು ಕಿಡಿಕಾರಿದ್ದಲ್ಲದೇ, ಶಿವಕುಮಾರ್ ಅವರು ರಾಜಿನಾಮೆ ನೀಡಬೇಕೆಂದು ಒತ್ತಾಯ ಮಾಡಿ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ನವೀನಕುಮಾರ, ಬಾಬಾಸಾಹೇಬ್ ಮುದಗಲ್, ಮಾರುತಿ ಹಿಂಡಸಗೇರಿ,ವಿನಾಯಕ ಗಾಡಿವಡ್ಡರ, ಪೂರ್ಣಿಮಾ ಸವದತ್ತಿ,ಪೂಜಾ ಮೆಣಸಿನಕಾಯಿ,ಗೀತಾ ಸುನಿತಾ, ಮಹಾದೇವಿ ಪಾಟೀಲ,ಶಂಕರಗೌಡ ದೊಡ್ಡಮನಿ, ಬೀಮರಾಯ ಗುಡೆನಕಟ್ಟಿ, ಬಸವರಾಜ ದನಿಗೊಂಡ,ಪ್ರಭು ಚೌಟಾ, ಸಿದ್ದು ಮರಗಲ್, ಅಹ್ಮದ್ ಅರಸೀಕೆರೆ,ಪುನಿತ್ ಅಡಗಲ್ಲ, ಶಾಬಾಜ ಮುದ್ಗಲ್, ಅಲಿ ಸಂದಿಮನಿ,ಕರೇಪ್ಪಾ ಪೂಜಾರ, ಮಂಜುನಾಥ ಹಗೇದಾರ, ಚಿದಂಬರ ನಾಡಗೌಡ, ಸಿದ್ದು ಮಹಾಂತಒಡೆಯರ, ಶಂಕರ ಪವಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ :-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
Share This Article
error: Content is protected !!