ಕೂಡಲ ಸಂಗಮ:– ಶ್ರೀ ಸಂಗಮೇಶ್ವರ ಶಿಶುವಿಹಾರ ಪ್ರಾಥಮಿಕ ಶಾಲೆ ಕೂಡಲ ಸಂಗಮ ಈ ಶಾಲೆಯ ಮಕ್ಕಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ, ಜಂಪ್ ರೋಪ್ ಮತ್ತು ಕರಾಟೆಯಲ್ಲಿ ಭಾಗವಯಿಸಿ ಸ್ಥಾನಗಳನ್ನು ಪಡೆದುಕೊಂಡ ವಿವರ. ಕರಾಟೆ ಸ್ಪರ್ಧೆಯಲ್ಲಿ ಸಮರ್ಥ ರಾ ಕವಳ್ಳಿ ದ್ವಿತೀಯ ಸ್ಥಾನ. ಜಂಪ್ ರೋಪ್ ಸ್ಪರ್ಧೆಯಲ್ಲಿ 04 ಜನ ಹೆಣ್ಣುಮಕ್ಕಳು ಹಾಗೂ 04 ಜನ ಗಂಡು ಮಕ್ಕಳು ಭಾಗವಯಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಮ್ಮ ಶಾಲೆಯ ಕೀರ್ತಿ ಪತಾಕೆಯನ್ನು ರಾಜ್ಯಮಟ್ಟದ ವರೆಗೂ ಎತ್ತಿ ಹಿಡಿದಿದ್ದಾರೆ ಎಂದು ಬಿ ವಿ ವಿ ಎಸ್ ಕಾರ್ಯಾಧ್ಯಕ್ಷರು, ಆದ ವೀರಣ್ಣ ಚರಂತಿಮಠ ಶಾಲಾ ಆಡಿಳಿತ ಮಂಡಳಿಯ ಕಾರ್ಯಾಧ್ಯಕ್ಷರು, ಪದನಿಮಿತ್ತ ಕಾರ್ಯದರ್ಶಿಗಳು ಮತ್ತು ಮುಖ್ಯ ಗುರುಗಳು ಶ್ರೀ G D ಬಡಿಗೇರ.ದೈಹಿಕ ಶಿಕ್ಷಕರಾದ ಶ್ರೀ VV ಮಹಾಲಿಂಗಾಪುರ ಹಾಗೂ ಸಿಬ್ಬಂದಿಗಳು ಮತ್ತು ಪಾಲಕರು ಊರಿನ ಗಣ್ಯಮಾನ್ಯರು ಶುಭಾಶಯಗಳು ತಿಳಿಸಿರುತ್ತಾರೆ
ವರದಿ:- ನಿಂಗರಾಜ ಬೇನಾಳ