ಕಲಬುರಗಿ:-ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಪ್ಪರಗಾ,ಕೊಡೇಕಲ್,ಗ್ರಾಮದಲ್ಲಿ ಮಾದಿಗ ಸಮಾಜದ 15 ವರ್ಷದ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು ಪೋಕ್ಸ್ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿ 20 ದಿನ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಫವಾಗಿದೆ ಎ ಜೆ ಸದಾಶಿವ ಆಯೋಗದ ಹೋರಾಟ ಸಮಿತಿಯ ರಾಜ್ಯೋಪಾಧ್ಯಕ್ಷರಾದ ಎಂದು ಗೋಪಾಲರಾವ ಕಟ್ಟಿಮನಿ ಸರ್ಕಾರಕ್ಕೆ ಆಪಾದನೆ ಮಾಡಿದ್ದಾರೆ ಕರ್ನಾಟಕದಲ್ಲಿ ಗೃಹ ಸಚಿವರು ಸಮಾಜ ಕಲ್ಯಾಣ ಸಚಿವರು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರೂ ಸಹ ದಲಿತರಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ.
ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಂಭವಿಸಿದ
ಘಟನೆಗಳಿಗೆ ಸಚಿವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪೋಲಿಸ್ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ.ಅತ್ಯಾಚಾರ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಹಾಗೂ ಆ ಗ್ರಾಮದಲ್ಲಿ ಮಾದಿಗ ಸಮುದಾಯದ ಕುಟುಂಬಗಳನ್ನು ಬಹಿಷ್ಕಾರ ಮಾಡಿದವರನ್ನು ಎಸ್‌ಸಿಎಸ್‌ಟಿ ಗೂಂಡಾ ಕಾಯ್ದೆಯಡಿ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು,ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದ ಅವರು,ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಯಾದಗಿರಿ ಬಂದು ಕರೆ ಮಾಡಿದ್ದೇವೆ.
ಇವತ್ತಿಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನಮಾನಗಳಲ್ಲಿ ಅಪರಾಧಿಗಳ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಪರಮೇಶ್ವರ ಖಾನಾಪುರ್ ಭೀಮಶಂಕರ್ ಬಿಲ್ಲವ್ ಪ್ರದೀಪ್ ಭಾವೆ ಮಲ್ಲಿಕಾರ್ಜುನ್ ದೊಡ್ಮನಿ ನಾಗರಾಜ್ ಸೋಲಾಪುರ್ ಮುಂತಾದ ಮಾದಿಗ ಸಮಾಜದ ಮುಖಂಡರು ಗುಲ್ಬರ್ಗದಿಂದ ಯಾದಗೀರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ :-ಸುನೀಲ್ ಸಲಗರ