Ad imageAd image

ಒಳ ಮಿಸಲಾತಿಗಾಗಿ ಬೃಹತ್ ಪ್ರತಿಭಟನೆ

Bharath Vaibhav
ಒಳ ಮಿಸಲಾತಿಗಾಗಿ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now

ಬೆಳಗಾವಿ:- ಪರಿಶಿಷ್ಟ ಜಾತಿಗೆ ಸಂಬಂಧಿಸಿದ 6:1 ಬಹುಮತದ ಸುಪ್ರೀಂಕೋರ್ಟ್ ತೀರ್ಪು ಪರಿಶಿಷ್ಟ ಜಾತಿ ಜನಾಂಗಕ್ಕೆ ಒಳ ಮೀಸಲಾತಿ ಕಲ್ಪಿಸಲು ಆಯಾ ರಾಜ್ಯಗಳಿಗೆ ಅಧಿಕಾರಿ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಒಳ ಮಿಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಏಕಕಾಲದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದಿನಾಂಕ 16- 10-2024 ಬುಧವಾರ ಅಂಬೇಡ್ಕರ್ ಉದ್ಯಾನವನದಲ್ಲಿ ಸೇರಿ ಅಲ್ಲಿಂದ ಚೆನ್ನಮ್ಮ ಸಕ೯ಲ್ ಮೂಲಕ ಜಿಲ್ಲಾಧಿಕಾರಿ ಕಛೇರಿವರಿಗೆ ಬೃಹತ್ ಸಂಖ್ಯೆಯಲ್ಲಿ ಮಾದಿಗ ಸಮುದಾಯದ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಸಾಮಾಜದ ಮುಖಂಡ ರಾಜೇಂದ್ರ ಐಹೊಳೆ ತಿಳಿಸಿದರು.

ಬುಧವಾರ ರಂದು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಎಲ್ಲ ತಾಲೂಕಿನ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗವನ್ನು ಜಾರಿಗೆ ಮಾಡುವುದಾಗಿ ಹೇಳಿ ಸಮಾಜದ ವೋಟ್ ಪಡೆದು ಇವತ್ತು ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ನ್ಯಾಯ ನೀಡಿದೆ ಸಿದ್ದರಾಮಯ್ಯನವರು ಸಮಾಜಕ್ಕೆ ಮೋಸ ಮಾಡಿದ್ದಾರೆ ಆದ್ದರಿಂದ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟರಲ್ಲಿ ಒಳಮೀಸಲಾತಿ ಕಲ್ಪಿಸಲು ರಾಜ್ಯಕ್ಕೆ ಅಧಿಕಾರ ನೀಡಿರುವುದರಿಂದ ಯಾವುದೇ ಉಪಸಮಿತಿ ಹಾಗೂ ಜನಗಣತಿ ವರದಿ ಇತರೆ ನೆಪವಡ್ಡಿ ಕಾಲ ಹರಣಮಾಡದೆ ಮಾದರಿಗೆ ಮಾತು ಕೊಟ್ಟಂತೆ ಒಳ ಮೀಸಲಾತಿಯನ್ನು ಇದೇ 18ರಂದು ರಂದು ನಡೆಯುವ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಬೇಕೆಂದು 16ರಂದು ಬುಧವಾರ ಒತ್ತಾಯಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಜಿಲ್ಲೆಯ ಮಾದಿಗ ಸಮಾಜ ಹಾಗೂ ಸಮಗಾರ, ಚಲವಾದಿ ಸಮಾಜದವರು ಒಳಮೀಸಲಾತಿಗೆ ಬೆಂಬಲ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಲ್ಲಾ ತಾಲೂಕಿನ ಮಾದಿಗ ಮುಖಂಡರು ಭಾಗವಹಿಸಿದ್ದರು

ವರದಿ :- ಆಕಾಶ ಮಾದರ್

WhatsApp Group Join Now
Telegram Group Join Now
Share This Article
error: Content is protected !!