ಯರಗಟ್ಟಿ : ಪಟ್ಟಣದ ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿಯಿಂದ 160 ಅಗ್ನಿವೀರ ಆಯ್ಕೆಯಾಗಿದ ಯುವಕರನ್ನು ಶುಕ್ರವಾರ ಅಕಾಡೆಮಿಯಿಂದ ಜೈ ಜೈವಾನ್ ಜೈ ಕಿಸಾನ್ ವಿವಿದ್ದೋದೇಶದ ಸಹಕಾರಿ ಸಂಘದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸೈನಿಕ ಕುಮಾರ ಹಿರೇಮಠ ಮಾತನಾಡಿ ಅವರು ಕೇಂದ್ರ ಸರ್ಕಾರ ದೇಶಪ್ರೇಮವನ್ನು ಬಿಂಬಿಸುವ ಮತ್ತು ಯುವಕರನ್ನು ಉತ್ತೇಜಿಸುವ ಅತ್ಯುತ್ತಮ ಯೋಜನೆ ಅಗ್ನಿವೀರು ಕಾರ್ಯಕ್ರಮವಾಗಿದೆ.
ಸ್ಥಳೀಯ ಯುವಕರ ಸಾಧನೆಯನ್ನು ಗುರುತಿಸಿ ಗೌರವಿಸುವುದು, ಅವರಿಗೆ ಸಮಾಜದಲ್ಲಿ ಸಿಗುವ ಮನ್ನಣೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ನಂತರ ಎಸ್ ಬಿ ಫೌಂಡೇಶನ್ ಅಧ್ಯಕ್ಷ ಸುರೇಶ ಭಜಂತ್ರಿ, ಮಾತನಾಡಿದ ಅವರು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದ್ದು, ಸದೃಢ, ಪ್ರಗತಿಪರ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಅವರ ನವೀನ ಚಿಂತನೆ, ಅಪಾರ ಶಕ್ತಿ ಮತ್ತು ದೇಶಭಕ್ತಿಯು ದೇಶದ ಸರ್ವತೋಮುಖ ಅಭಿವೃದ್ಧಿಗೆ ಬುನಾದಿಯಾಗಿದೆ ಎಂದು ಹೇಳಿದರು.
ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಯುವ ಮುಖಂಡ ಸತೀಶ ತಡಸಲೂರ, ಜೆ.ರತ್ನಾಕರ ಶೆಟ್ಟಿ, ಮಾಜಿ ಸೈನಿಕರಾದ ರಾಜೇಶ ಕೊಜಾರ, ಮಹಾಂತೇಶ ಚನ್ನಮೇತ್ರಿ, ಎಸ್ ಜಿ ಕೆ ಅಕಾಡೆಮಿಯ ಕೊಚ್ ಕೊಟ್ರೇಶ ಎಚ್, ಕರವೇ ಅಧ್ಯಕ್ಷ ರಫೀಕ ಡಿಕೆ, ಫಾರುಕ್ ಅತ್ತಾರ, ಚಿಂದಬರ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಈರಣ್ಣಾ ಹೂಲ್ಲೂರ


