ಕಾಳಗಿ : ಪಟ್ಟಣದಲ್ಲಿ ಶುಕ್ರವಾರ ದಂದು ಶಾಂತಿ ಪ್ರಿಯ ಭಗವಾನ್ ಗೌತಮ್ ಬುದ್ಧರ 2570ನೇ ಬುದ್ಧ ಪೂರ್ಣಿಮಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಾಗೂ ಶಾಂತಿಯುತವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ತಸೀಲ್ದಾರ್ ಕಾರ್ಯಾಲಯದವರೆಗೆ ಗೌತಮ್ ಬುದ್ಧರ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ಕರೆತಂದು, ಬುದ್ಧ ವಂದನೆಯೊಂದಿಗೆ ಸಾಗಲಾಯಿತು. ಮೆರವಣಿಗೆ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೂ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಭಾವಚಿತ್ರಕ್ಕೂ ಪೂಜೆ ಸಲ್ಲಿಸಲಾಯಿತು.
ನಂತರ ತಸೀಲ್ದಾರ್ ಕಾರ್ಯಾಲಯದಲ್ಲಿ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬುದ್ಧ ವಂದನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕನಗನಹಳ್ಳಿ ಪಾಲಿ ಭಾಷೆ ಮತ್ತು ಧಮ್ಮ ಲಿಪಿ ಶಿಕ್ಷಕರಾದ ರಣಧೀರ್ ಹೊಸಮನಿ ಅವರು
ಜಗತ್ತಿನಲ್ಲಿ ದುಃಖವಿದೆ,
ಅದಕ್ಕೆ ಕಾರಣವಿದೆ,
ಅದಕ್ಕೆ ಪರಿಹಾರವೂ ಇದೆ,
ಆ ಪರಿಹಾರಕ್ಕೆ ಮಾರ್ಗವೂ ಇದೆ,
ಬುದ್ಧರ ಮೈತ್ರಿ ಮತ್ತು ಕರುಣೆ ತತ್ವಗಳ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮವನ್ನು ಶಿವಕುಮಾರ್ ಶಾಸ್ತ್ರೀ ಅವರು ನಿರೂಪಣೆ ಮಾಡಿದರು. ನಾಗರಾಜ್ ಸಜ್ಜನ್ ಅವರು ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಸೀಲ್ದಾರ್ ಪೃತ್ವಿರಾಜ ಪಾಟೀಲ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಂಕಜಾ ಎ, ಪಶು ವೈದ್ಯರಾದ ಗೌತಮ್ ಕಾಂಬ್ಳೆ, ಕೃಷಿ ಅಧಿಕಾರಿ ರಾಹುಲ್, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಹಾಗೂ ರಾಘವೇಂದ್ರ ಗುತ್ತೇದಾರ,ಬಾಬುರಾವ ಶೇಳ್ಳಗಿ, ಪರಮೇಶ್ವರ್ ಕಟ್ಟಿಮನಿ, ಗುರುನಂದೇಶ ಕೊಣಿನ, ಶಿವಕುಮಾರ್ ಚಿಂತಕೊಟಿ, ಮಲ್ಲಿಕಾರ್ಜುನ ಡೊಣ್ಣುರ, ಮಾರುತಿ ಬೇವಿನಗೀಡ, ಖತಲಪ ಅಂಕನ್, ನಾಗೇಂದ್ರ ಅಂಕನ್, ಮಾರುತಿ ಮಳಗಿ, ದೇವಿಂದ್ರ ಹುಣಚಿಕರ್, ರಮೇಶ್ ಶ್ರಿಗನ್, ಮಲ್ಲಿಕಾರ್ಜುನ ಸಜ್ಜನ, ರಾಹುಲ್ ಕಿರಣ್, ಸತೀಶ್ ಸಕ್ರಿ, ರವಿ ಮಂತ, ಮಲ್ಲಿಕಾರ್ಜುನ ಗವ್ಹಾರ, ಶರಣು ಮೇಲಕೇರಿ, ಅವಿನಾಶ್ ಮೂಲಿಮನಿ, ಪ್ರದೀಪ್ ಡೊಣ್ಣುರ, ಸುಧಾಕರ್ ಸಾಲಹಳ್ಳಿ, ಶಿವಶರಣಪ್ಪ ಮಾಕಪನೊರ, ಮರೆಪ್ಪ ದಂಡಿನ, ಜೈಭೀಮ್ ತಾಡಪ್ಪಳಿ, ಅನೀಲ್ ಗಂಜಗೀರಾ, ರಾಜು ದೊಟಿಕೋಳ, ದತ್ತು ಗುತ್ತೆದಾರ, ಶರಣು ಬೇಲೂರ್, ಸಂತೋಷ ಚಂದನಕೇರಿ, ರವಿಕುಮಾರ್ ಯಲಲಾಕರ್, ಮಾಣಿಕರಾವ್, ಮಾಣಿಕ್ ರಾಠೋಡ್, ದಿಲೀಪ್ ಭರತನೂರ, ಅಮರ್ ಸೂರ್ಯವಂಶಿ, ಜಾವೇದ ತೆಂಗಳಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ಬುದ್ಧರ ಶಾಂತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವಂತಾಗಿದ್ದು, ಭಾಗವಹಿಸಿದ ಎಲ್ಲರ ಮನಸ್ಸಿನಲ್ಲಿ ವಿಶೇಷ ಪ್ರೇರಣೆಯನ್ನು ಮೂಡಿಸಿತು.
ವರದಿ : ಹಣಮಂತ ಕುಡಹಳ್ಳಿ

