ಶಹಪುರ : ಹಾಲಭಾವಿ-ಹೋತಪೇಟ ಕೈಲಾಸ ಆಶ್ರಮದಲ್ಲಿ ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳವರ ಪ್ರತಿ ವರ್ಷ ಒಂದು ತಿಂಗಳು ಮೌನಾಚರಣೆ ಮಾಡುತ್ತಾರೆ 27ನೇ ವರ್ಷದ ಮೌನ ಅನುಷ್ಠಾನದ ಮಂಗಲ ಕಾರ್ಯವು ದಿನಾಂಕ 17-10-2026 ಶನಿವಾರ 11 ಗಂಟೆಗೆ ಗುರುಗಳ ಪಾದ ಪೂಜೆ ಮಾಡುವ ಮೂಲಕ ನೆರವೇರುವದು. ಹಾಗೂ ಸುಮಾರು 500 ಮುತೈದೆಯರಿಗೆ ಉಡಿ ತುಂಬುವ ಕಾರ್ಯ , ನೆರವೇರುವುದು 1000ಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು , ಉಪಸ್ಥಿತರಿರುವ ಪೂಜ್ಯರಿಂದ ಆಶೀರ್ವಚನ ಹೀಗೆ ಹಲವಾರು ಕಾರ್ಯಕ್ರಮಗಳು ನೆರವೇರುವದು.
ಕೈಲಾಸ ಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು ಚಂದ್ರಕಲಾ ಪಿ ಗೂಗಲ್ ಶಿಕ್ಷಕರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.


