LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಈ ರೀತಿ ಚೆಕ್ ಮಾಡಿ

Advertisement

ಬೆಂಗಳೂರು : ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ 7 ಅಂದರೆ ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಏಪ್ರಿಲ್ 7, 2026 ರಂದು ಅಂದರೆ ನಾಳೆ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಫಲಿತಾಂಶ ಬಿಡುಗಡೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.


ಫಲಿತಾಂಶ ಪ್ರಕಟಣೆಯ ಕುರಿತು ಇಲಾಖೆಯು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಈಗಾಗಲೇ ಪತ್ರ ಬರೆದಿದೆ. ಸಚಿವರ ಲಭ್ಯತೆಯನ್ನು ಆಧರಿಸಿ ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ.


ತಾಂತ್ರಿಕ ಕೆಲಸಗಳು ಹಾಗೂ ಅಂಕಗಳ ಕ್ರೋಡೀಕರಣ ಪ್ರಕ್ರಿಯೆ ಮುಗಿದಿದ್ದು, ಏಪ್ರಿಲ್ 7 ರಂದು ರಿಸಲ್ಟ್ ನೀಡಲು ಇಲಾಖೆ ಉತ್ಸುಕವಾಗಿದೆ.


ಇನ್ನು ಪ್ರಕಟ ಆಗುವ ಫಲಿತಾಂಶವನ್ನು ನೋಡುವುದು ಹೇಗೆ ಎಂಬ ಗೊಂದಲಗಳು ವಿದ್ಯಾರ್ಥಿಗಳಿಗೆ ಇರಬಹುದು. ಅದಕ್ಕೆ ಭಯಬೇಡ, ಇಲ್ಲಿ ನೀಡಿರುವ ಲಿಂಕ್​​​ಗಳನ್ನು ಓಪನ್​ ಮಾಡಿ ನೋಡಿದ್ರೆ ಸಾಕು. karresults.nic.in ಮತ್ತು kseab.karnataka.gov.in ಅನ್ನು ಶಿಕ್ಷಣ ಇಲಾಖೆ ನೀಡಿದೆ. ಒಂದು ವೇಳೆ ಈ ಲಿಂಕ್​​ಗಳಲ್ಲಿ ದೋಷ ಬಂದರೆ, ಇನ್ನು ಆಯ್ಕೆಯನ್ನು ಕೂಡ ನೀಡಲಾಗಿದೆ. PUC ಫಲಿತಾಂಶಗಳನ್ನು ಡಿಜಿಲಾಕರ್ ವೆಬ್‌ಸೈಟ್ - digilocker.gov.in ನಲ್ಲಿಯೂ ಪರಿಶೀಲಿಸಲು ಅವಕಾಶವನ್ನು ನೀಡಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ ಪರಿಹಾರಕ್ಕಾಗಿ ₹22,400 ಕೋಟಿ ಕೊಡಿ : ಕೇಂದ್ರಕ್ಕೆ ಮತ್ತೆ ಪತ್ರ ಬರೆದ ಜಿ. ಪರಮೇಶ್ವರ್ಮೈದಾನದಲ್ಲೇ ದುರಂತ: ಗೋಲ್‌ಕೀಪರ್ ಡಿಕ್ಕಿಯಾಗಿ ಆಟಗಾರ ಸಾವುಮಾನ್ವಿ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ದಾಖಲೆಮಾನ್ವಿ ಪಟ್ಟಣದ ಕುಡಿಯುವ ನೀರಿನ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಿ: ಎನ್.ಎಸ್. ಬೋಸರಾಜುಬಾಪುರ ನರಸಿಂಹ ಶೆಟ್ಟಿ ಕುಟುಂಬಕ್ಕೆ ಆರ್ಯವೈಶ್ಯ ಸಂಘದಿಂದ 2 ಲಕ್ಷ ಸಹಾಯಧನಗೋಕಾಕನಲ್ಲಿ ಮಹಿಳೆ ಕೊಲೆ ಆರೋಪ: ಪ್ರಿಯಕರನ ವಿರುದ್ಧ ಎಫ್‌ಐಆರ್ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ:  ಕೆ.ಎನ್.ರಾಜಣ್ಣ ಕೆ. ವಿ. ಅನಿಸ್ ಅಮೋಘ ಶತಕ : ಇನ್ನಿಂಗ್ಸ್ ಗೆಲುವಿನತ್ತ ಕರ್ನಾಟಕ ಚಿತ್ತ ವೈಭವ್ ಸೂರ್ಯವಂಸಿ, ರಜತ ಪಟಿದಾರ್ ಗೆ ಸ್ಥಾನ ರಿಂಗ್ ರೋಡ್ ಬೇಡ, ಪಾಣಂದ್ ರಸ್ತೆಗಳನ್ನು ದುರಸ್ತಿ ಮಾಡಿ - ಸದಲಗಾ ಭಾಗದ ರೈತರ ಏಕಮುಖ ಬೇಡಿಕೆ