ವಾಷಿಂಗ್ಟನ್: ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಹಾಗೂ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್ನ ಕೌಂಟಿ ವಾಟರ್ಫೋರ್ಡ್ನಲ್ಲಿ ಐತಿಹಾಸಿಕ ಐರಿಶ್ ಸ್ಟ್ರಾನ್ಕಲ್ಲಿ ಕ್ಯಾಸೆಲ್ ಎಸ್ಟೇಟ್ ಅನ್ನು ಖರೀದಿಸಿದ್ದಾರೆ.
538 ಕೋಟಿ ರೂ. ಮೌಲ್ಯದ ಕೋಟೆಯು 440 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.1830ರಲ್ಲಿ ನಿರ್ಮಿಸಲಾದ ಈ ಭವ್ಯ ಕೋಟೆಯನ್ನು 2003ರಲ್ಲಿ ನವೀಕರಣ ಮಾಡಲಾಗಿದೆ.
ಮುಖ್ಯ ಬಂಗಲೆಯು 3 ಅಂತಸ್ತನ್ನು ಒಳಗೊಂಡಿದೆ ಎಂದು ತಿಳಿದುಬಂದಿದ್ದು, ಇದನ್ನು ಅಂದಿನ ಸಂಸತ್ ಸದಸ್ಯ ಜಾನ್ ಕೀಲಿ ಎಂಬುವವರಿಗೆ ನಿರ್ಮಿಸಲಾಗಿತ್ತು ಎಂದು ಇತಿಹಾಸ ಹೇಳುತ್ತದೆ.


