ಕಲಾದಗಿ : ಇಲ್ಲಿನ ಶ್ರೀ ಗುರುಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಜವಾಹರಲಾಲ್ ನೆಹರು ಜನ್ಮದಿನದ ಹಾಗೂ ಮಕ್ಕಳ ದಿನಾಚರಣೆ ಸಂಭ್ರಮವನ್ನು ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತ್ತು ಶಾಲೆಯ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿಯ ಸದಸ್ಯರು ದೀಪ ಬೆಳಗಿಸುವ ಮೂಲಕ ಹಾಗೂ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ ನೆಹರು ಜನ್ಮದಿನವಾದ ನವೆಂಬರ್ 14 ಅನ್ನು ದೇಶಾದ್ಯಂತ ಮಕ್ಕಳ ದಿನಾಚರಣೆ ಆಗಿ ಆಚರಿಸಲಾಗುತ್ತದೆ
ಪಂಡಿತ್ ಜವಾಹರಲಾಲ ನೆಹರು 1889ರ ನವೆಂಬರ್ 14ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು
ಮಕ್ಕಳೊಂದಿಗೆ ಬೆರೆಯುವುದನ್ನು ಮತ್ತು ಅವರಿಗೆ ಮಾರ್ಗದರ್ಶನ ನೀಡುವುದನ್ನು ನೆಹರು ತುಂಬಾ ಇಷ್ಟಪಡುತ್ತಿದ್ದರು ಹಾಗೂ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮತ್ತು ದೇಶದ ನಿಜವಾದ ಶಕ್ತಿ ಎಂಬುದು ನೆಹರು ಬಲವಾದ ನಂಬಿಕೆಯಾಗಿತ್ತು.ಇದೇ ಕಾರಣಕ್ಕೆ ಮಕ್ಕಳು ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು
1964ಕ್ಕಿಂತ ಮೊದಲು ವಿಶ್ವಸಂಸ್ಥೆಯ ಘೋಷಣೆಯಂತೆ ಭಾರತದಲ್ಲೂ ನವೆಂಬರ್ 20ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತಿತ್ತು ಆದರೆ 1964ರಲ್ಲಿ ನೆಹರು ನಿಧನರಾದ ನಂತರ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಭಾರತೀಯ ಸಂಸತ್ತು ಅವರ ಜನ್ಮದಿನವಾದ ನವೆಂಬರ್ 14ನ್ನು ಅಧಿಕೃತವಾಗಿ ಮಕ್ಕಳ ದಿನವನ್ನಾಗಿ ಘೋಷಿಸಿತು ಎಂದು ಮುಖ್ಯ ಗುರುಗಳಾದ ಎಸ್ ವಿ ಲಮಾಣಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ವರದಿ : ಬಸವರಾಜ ಪೂಜಾರಿ


