ಬೈಲಹೊಂಗಲ : ಭಾರತೀಯ ಜೀವ ವಿಮಾ ನಿಗಮದ (LIC) ಬೆಳಗಾವಿ ವಿಭಾಗದ ವತಿಯಿಂದ ಆಯೋಜಿಸಲಾದ ‘ಜೀವನ ಚೈತನ್ಯ ಕ್ರಿಕೆಟ್ ಟ್ರೋಫಿ’ ಕ್ರೀಡಾಕೂಟಕ್ಕೆ ಬೈಲಹೊಂಗಲದಲ್ಲಿ ಶನಿವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಭಾರತೀಯ ಜೀವ ವಿಮಾ ನಿಗಮದ ಬೆಳಗಾವಿ ವಿಭಾಗದ ಹಿರಿಯ ವಿಭಾಗಾಧಿಕಾರಿಗಳಾದ ಶ್ರೀ ಎಸ್. ಎ. ಅಲ್ಲಾಬಾಷ್ ಸಾಹೇಬರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಮಾರಾಟ ವ್ಯವಸ್ಥಾಪಕರಾದ ಶ್ರೀ ಬಸವರಾಜ್ ತೆಗ್ಗಿ, ಬೈಲಹೊಂಗಲ ಶಾಖೆಯ ಶಾಖಾಧಿಕಾರಿಗಳಾದ ಶ್ರೀ ಮಹಾಂತೇಶ್ ಎಂ. ಸಿ., ಆಡಳಿತ ಅಧಿಕಾರಿಗಳಾದ ಶ್ರೀಮತಿ ಉಷಾ ಹೆಗಡೆ, ಸಹಾಯಕ ಆಡಳಿತ ಅಧಿಕಾರಿಗಳಾದ ಶ್ರೀ ನಾಗರಾಜ್ ಕಟ್ಟಿಮನಿ ಹಾಗೂ ಶ್ರೀ ಕೆ. ಜಿ. ಚರಂತಿಮಠ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳು, ನಿಗಮದ ಸಿಬ್ಬಂದಿ ವರ್ಗದವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನೆಚ್ಚಿನ ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಕ್ರೀಡೆಯು ದೈಹಿಕ ಆರೋಗ್ಯ, ಮಾನಸಿಕ ಉಲ್ಲಾಸ, ಶಿಸ್ತು ಹಾಗೂ ತಂಡದ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕ್ರೀಡಾಕೂಟಗಳು ನಿಗಮದ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರತಿನಿಧಿಗಳ ನಡುವಿನ ಸೌಹಾರ್ದತೆ ಮತ್ತು ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತವೆ.
ಜೀವನ ಚೈತನ್ಯ – ಕ್ರೀಡೆಯ ಮೂಲಕ ಆರೋಗ್ಯ, ಒಗ್ಗಟ್ಟು ಮತ್ತು ಉತ್ಸಾಹದ ಸಂಭ್ರಮ
ವರದಿ : ದುಂಡಪ್ಪ ಹೂಲಿ


