ಹ್ಯಾಮಿಲ್ಟನ್: ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಆ ತಂಡದ ಆಟಗಾರರು ಗಾಯಗೊಳ್ಳುತ್ತಿರುವುದು ದೊಡ್ಡ ತಲೆ ನೋವಾಗಿದೆ.
ಭಾರತ ವಿರುದ್ಧದ ಟಿ-20 ಸರಣಿ ಸೋತು ನಂತರ ಇದೀಗ ಏಕದಿನ ಸರಣಿಯಲ್ಲೂ 0-2 ರಿಂದ ಹಿಂದಿರುವ ತವರು ತಂಡಕ್ಕೆ ಈಗ ಗಾಯದ ಸಮಸ್ಯೆಯು ಕೂಡ ಕಾಡ ತೊಡಗಿದೆ.
ವೇಗದ ಬೌಲರ್ ಪರ್ಗ್ಯಯುಸನ್ ಗಾಯಗೊಂಡಿದ್ದು ಕೊನೆಯ 2 ಏಕದಿನ ಪಂದ್ಯಗಳನ್ನು ಆಡುತ್ತಿಲ್ಲ. ಅವರ ಜಾಗದಲ್ಲಿ ಕ್ರೀಸ್ಟಿಯಾನ್ ಕ್ಲರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬ್ಲೆರ್ ತಿಕ್ನೆರ್ ಕೂಡ ಗಾಯಗೊಂಡಿದ್ದು, ಕಡ್ಡಾಯ ವಿರಾಮದಲ್ಲಿ ಇದ್ದಾರೆ.
ಮತ್ತೋರ್ವ್ ವೇಗಿ ಮ್ಯಾಟ ಹೆನ್ರಿ ಕೂಡ ಫಿಟ್ನೆಶ್ ಸಮಸ್ಯೆ ಎದುರಿಸುತ್ತಿದ್ದಾರೆ.


