Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

GBA ಚುನಾವಣೆಗೆ ಇಂದು ಮಹೂರ್ತ ಫಿಕ್ಸ್ : ಮಧ್ಯಾಹ್ನದ ವೇಳೆಗೆ ಘೋಷಣೆ ಸಾಧ್ಯತೆ

Advertisement

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ಮಹಾನಗರದ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಗೆ ಇಂದು ಮುಹೂರ್ತ ಫಿಕ್ಸ್ ಆಗಲಿದೆ, ಇಂದು  ಮಧ್ಯಾಹ್ನದ ವೇಳೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಲಿದೆ.

ಚುನಾವಣೆಗೆ ದಿನಾಂಕ ನಿಗದಿ ಮಾಡುವ ಸಂಬಂಧ ಎಲ್ಲ ಪಾಲಿಕೆಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಚುನಾವಣಾ ಆಯೋಗ ಕರೆದಿದೆ. ಈ ನಡುವೆ ಮೂಲಗಳ ಪ್ರಕಾರ ಈ ಸಭೆ ನಡೆಯುವುದು ಅನುಮಾ ಎನ್ನಲಾಗಿದ್ದು, ಯಾವುದೇ ಸಭೆ ನಡೆಸದೆ, ದಿನಾಂಕ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಭೆ ಕರೆದು ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅನಂತರ ಒಂದು ತೀರ್ಮಾನಕ್ಕೆ ಬರಲು ಆಯೋಗ ತೀರ್ಮಾನಿಸಿತ್ತು.ಆದರೆ, ಸರಕಾರ ನೇರವಾಗಿ ಚುನಾವಣೆ ಘೋಷಣೆ ಮಾಡುವಂತೆ ಸಲಹೆ ನೀಡಿದೆ ಎನ್ನಲಾಗಿದೆ‌. ಸರಕಾರವೇ ಚುನಾವಣೆ ನಡೆಸಲು ಆಸಕ್ತಿ ತೋರಿದ ಹಿನ್ನಲೆಯಲ್ಲಿ ದಿನಾಂಕ ಘೋಷಣೆಗೆ ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ನಡೆದ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಸರಕಾರಕ್ಕೆ  ಆತ್ಮವಿಶ್ವಾಸ ಹೆಚ್ಚಿಸಿದೆ. ಕಾಂಗ್ರೆಸ್ ಅಸ್ತಿತ್ವದಲ್ಲಿರುವ ಕೇರಳದಲ್ಲಿಯೂ ಅಧಿಕಾರಕ್ಕೆ ಬಂದಿದೆ. ತಮಿಳುನಾಡಿನಲ್ಲಿಯೂ ಕೂಡ ಅಧಿಕಾರದ ಚುಕ್ಕಾಣಿ ಹಿಡಯುವ ಟಿವಿಕೆ ಜತೆಗೆ ಮೈತ್ರಿ ಮಾಡಿಕೊಂಡಿದೆ.

ಇದು ಕಾಂಗ್ರೆಸ್ ಸರಕಾರದ ವಿಶ್ವಾಸ ಹೆಚ್ಚಿಸಿದ್ದು, ಈ ಸಂದರ್ಭದಲ್ಲಿ ಜಿಬಿಎ ಚುನಾವಣೆ ನಡೆದರೆ, ಅಧಿಕಾರಕ್ಕೆ ಬರುವುದು ಸುಲಭ ಹಾಗೂ ಸುಪ್ರೀಂ ಕೋರ್ಟ್ ನ ಆದೇಶದಂತೆ ಜೂನ್ 30 ರೊಳಗೆ ಚುನಾವಣೆ ನಡೆಸಿದಂತೆಯೂ ಆಗುತ್ತದೆ ಎಂಬ ತೀರ್ಮಾನಕ್ಕೆ ಸರಕಾರ ಬಂದಿದೆ ಎನ್ನಲಾಗಿದೆ.

ವರದಿ: ಅಯ್ಯಣ್ಣ ಮಾಸ್ಟರ್

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೀಟ್ ಸ್ಟ್ರೋಕ್ ನಿಂದ ಬೆಳಗಾವಿಯಲ್ಲಿ ಮತ್ತೋರ್ವ ವ್ಯಕ್ತಿ ಬಲಿಹುಬ್ಬಳ್ಳಿ ಧಾರವಾಡ ಪಾಲಿಕೆಯ 12 ಕಚೇರಿಗಳ ಮೇಲೆ ಲೋಕಾಯುಕ್ತ ದಿಡೀರ್ ದಾಳಿಆದಷ್ಟು ಬೇಗನೆ ಸಚಿವ ಸಂಪುಟ ಪುನಾರಚನೆಯಾಗಲಿದೆ : ಸಲೀಂ ಅಹ್ಮದ್ ಜೂನ್ 14 ರಿಂದ 24ರೊಳಗೆ ಜಿಬಿಎ ಚುನಾವಣೆ ಅಂಜನಾದ್ರಿ ಹನುಮಂತನಿಗೆ ಬರೋಬ್ಬರಿ 2.5 ಕೋಟಿ ರೂ. ಮೌಲ್ಯದ ಕಿರೀಟ ಅರ್ಪಿಸಿದ ಭಕ್ತಜೈಲಿನಲ್ಲಿ ಅರಳಿದ ಪ್ರೀತಿ : ಕೊಲೆ ಆರೋಪಿಯನ್ನೇ ವರಸಿದ ಮಹಿಳಾ ಪೊಲೀಸ್ ಅಧಿಕಾರಿಅಲ್ಪಸಂಖ್ಯಾತರ ಘಟಕದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಜಿನತ ಜಾಕೀರ ಟಂಕಸಾಲಿ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದ ಕೆಪಿಸಿಸಿ ಉಪಾಧ್ಯಕ್ಷ ಎಂ ಬಿ ಸೌದಾಗರGBA ಚುನಾವಣೆಗೆ ಇಂದು ಮಹೂರ್ತ ಫಿಕ್ಸ್ : ಮಧ್ಯಾಹ್ನದ ವೇಳೆಗೆ ಘೋಷಣೆ ಸಾಧ್ಯತೆವಿಚಿತ್ರ ಘಟನೆ : ಪ್ರೀತಿಸಿ ಅಕ್ಕನನ್ನೇ ಮದುವೆಯಾದ ತಮ್ಮಕೈದಿಗಳಿಗೆ ಬಿಗ್ ಶಾಕ್ : ಕಡ್ಡಾಯ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ