ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ‘ಆರೋಗ್ಯಕರ ವಯಸ್ಸಿಗೆ ಯೋಗ’ ಎಂಬ ಥೀಮ್ ಅಡಿಯಲ್ಲಿ 12ನೆಯ ವಿಶ್ವ ಯೋಗ ದಿನ ಆಚರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ಇತಿಹಾಸ ತಿಳಿಸಿಕೊಡುವುದರ ಜೊತೆಗೆ ವಜ್ರಾಸನ, ವಕ್ರಾಸನ, ಪದ್ಮಾಸನ, ಪಾದಹಸ್ತಾಸನ, ತ್ರಿಕೋನಾಸನ, ಭುಜಂಗಾಸನ, ಮಕರಾಸನ, ಅರ್ಧ ಹಾಲಾಸನ ಮುಂತಾದ ವಿವಿಧ ಯೋಗಾಸನಗಳನ್ನು ಮತ್ತು ಪ್ರಾಣಾಯಾಮವನ್ನು ಮಾಡಿಸಿದರು. ಯೋಗಮಂತ್ರ, ಓಂಕಾರ ಹೇಳಿಕೊಡಲಾಯಿತು. ವಿದ್ಯಾರ್ಥಿಗಳಾದ ಭೂಮಿಕಾ ಗರಗದ, ಶ್ರಾವಣಿ ಹೊಂಗಲ, ಶ್ರೇಯಾ ಶೀಗಿಹಳ್ಳಿಮಠ ಯೋಗದ ಉಪಯೋಗದ ಕುರಿತು ಭಾಷಣ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಯೋಗ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುವುದಲ್ಲದೇ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ ಎಂದರು. ವಿಶ್ವಕ್ಕೆ ಯೋಗದ ಪರಿಚಯ ಮಾಡಿಕೊಟ್ಟ ಭಾರತದ ಬಗ್ಗೆ ನಮಗೆಲ್ಲ ಹೆಮ್ಮೆ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಪ್ರತಿದಿನ ಒಂದಿಷ್ಟು ಸಮಯ ಯೋಗಾಭ್ಯಾಸಕ್ಕೆ ಮೀಸಲಿಡುವುದರಿಂದ ಒತ್ತಡರಹಿತ ಬದುಕು ಸಾಗಿಸಬಹುದು ಎಂದು ಅವರು ಹೇಳಿದರು.
ಕಾರ್ಯಕಕ್ರಮದಲ್ಲಿ ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ, ಹೇಮಲತಾ ಪುರಾಣಿಕ, ಗಾಯತ್ರಿ ತುರಾದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾ ಗರಗದ ನಿರೂಪಿಸಿದರು. ಚನ್ನಬಸಮ್ಮ ಸೊಗಲದ ಸ್ವಾಗತಿಸಿದರು. ಪಲ್ಲವಿ ಸೂರ್ಯವಂಶಿ ವಂದಿಸಿದರು.
ವರದಿ :ದುಂಡಪ್ಪ ಹೂಲಿ


